‘ಅಖಂಡ 2′ ಸ್ಪೆಷಲ್‌ ಶೋ ವೀಕ್ಷಿಸಲಿರುವ ಪ್ರಧಾನಿ ಮೋದಿ

ಹೈದರಾಬಾದ್: ಟಾಲಿವುಡ್‌ ದಿಗ್ಗಜ ನಟ ನಂದಮೂರಿ ಬಾಲಕೃಷ್ಣ ಅಭಿನಯದ ʼಅಖಂಡ -2ʼ ಸಿನಿಮಾ ಹಿಟ್‌ ಲಿಸ್ಟ್‌ಗೆ ಸೇರಿದ್ದು, ಸಿನಿಮಾ ರಿಲೀಸ್‌ ಆದ ಮೂರೇ ದಿನದಲ್ಲಿ 15 ಕೋಟಿ ರೂಪಾಯಿ ಗಳಿಸಿ ಇಂಡಿಯನ್‌ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ.

ಇದುವರೆಗೆ ಚಿತ್ರ ಭಾರತದಲ್ಲಿ 61 ಕೋಟಿ ರೂಪಾಯಿ ಗಳಿಸಿದೆ. ಚಿತ್ರ ಭರ್ಜರಿ ಗಳಿಕೆ ಕಾಣುತ್ತಿರುವ ಬೆನ್ನಲ್ಲೇ ಚಿತ್ರತಂಡ ಭಾನುವಾರ ಹೈದರಾಬಾದ್‌ನಲ್ಲಿ ಸಕ್ಸಸ್‌ ಮೀಟ್‌ ಆಯೋಜನೆ ಮಾಡಲಾಗಿತ್ತು. ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಬೋಯಪಾಟಿ ಶ್ರೀನು ಅವರು ʼಅಖಂಡ -2ʼ ಸಿನಿಮಾವನ್ನು ಪ್ರಧಾನಿ ಮೋದಿ ಅವರು ವೀಕ್ಷಿಸಲಿದ್ದಾರೆ ಎಂದಿದ್ದಾರೆ.

ದೆಹಲಿಯಲ್ಲಿ ‘ಅಖಂಡ 2’ ವಿಶೇಷ ಶೋ ಆಯೋಜನೆ ಮಾಡಲಿದ್ದೇವೆ. ಈ ಶೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ ಎಂದಿದ್ದಾರೆ. ಮೋದಿಯವರು ಸಿನಿಮಾ ಬಗ್ಗೆ ಕೇಳಿದ್ದಾರೆ. ಅವರು ಶೀಘ್ರದಲ್ಲೇ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂದಿದ್ದಾರೆ.

ನಿರ್ದೇಶಕರು ಇಲ್ಲಿ ಯಾವ ದಿನಾಂಕವೆನ್ನುವುದನ್ನು ಬಹಿರಂಗ ಮಾಡಿಲ್ಲ. ಮುಂದಿನ ದಿನಗಳಲ್ಲಿ ದಿನಾಂಕವನ್ನು ಅನೌನ್ಸ್‌ ಮಾಡುವ ಸಾಧ್ಯತೆಯಿದೆ.

error: Content is protected !!