IPL 2026: ಇಂದು ಅಬುದಾಭಿಯಲ್ಲಿ ಮಿನಿ ಹರಾಜು… ಐಪಿಎಲ್‌ ಆರಂಭಕ್ಕೆ ಡೇಟ್‌ ಫಿಕ್ಸ್!

ಅಬುದಾಭಿ: ಐಪಿಎಲ್‌ 2026ರ ಮಿನಿ ಹರಾಜು ಇಂದು(ಡಿ.16) ಅಬುದಾಭಿಯ ಎತಿಹಾದ್ ಅರೆನಾದಲ್ಲಿ ನಡೆಯಲಿದ್ದು, ಈ ಹರಾಜಿನಲ್ಲಿ 10 ತಂಡಗಳು ತಮ್ಮ ತಂಡಗಳಿಗೆ ಅಗತ್ಯವಿರುವ ಸ್ಟಾರ್ ಆಟಗಾರರನ್ನು ಆರಿಸಿಕೊಳ್ಳಲಿದ್ದಾರೆ. 77 ಸ್ಥಾನಕ್ಕಾಗಿ 369 ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ಫ್ರಾಂಚೈಸಿ ತನ್ನ 25 ಆಟಗಾರರ ಕೋಟಾವನ್ನು ಭರ್ತಿ ಮಾಡಿದರೆ, ಗರಿಷ್ಠ 77 ಆಟಗಾರರನ್ನು ಖರೀದಿಸಬಹುದಾಗಿದೆ.

ಈ ಹರಾಜಿಗೆ ಒಂದು ದಿನದ ಮುನ್ನ ಬಿಸಿಸಿಐ 19ನೇ ಆವೃತ್ತಿಯ ಐಪಿಎಲ್‌ ಆರಂಭದ ದಿನಾಂಕದ ನಿಗದಿಪಡಿಸಲಾಗಿದೆ. ಈ ಬಾರಿಯ ಐಪಿಎಲ್‌ ಮಾರ್ಚ್ 26 ರಿಂದ ಆರಂಭವಾಗಿ ಮೇ 31ರ ವರೆಗೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.ಈ ಮೂಲಕ ಟೂರ್ನಮೆಂಟ್ ಸುಮಾರು ಎರಡು ತಿಂಗಳು ಹೆಚ್ಚು ಕಾಲ ನಡೆಯಲಿದೆ. ಇದರಿಂದ ಕ್ರೀಡಾಪ್ರಿಯರಿಗೆ ಹಲವು ಆಕರ್ಷಕ ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ತವರು ಮೈದಾನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಿಸುವುದೇ ಎಂಬುದು ಇನ್ನೂ ನಿರ್ಧಾರಗೊಂಡಿಲ್ಲ. ಕಳೆದ ವರ್ಷ ಪ್ರಶಸ್ತಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಘಟನೆ ಎಲ್ಲಾ ಆಟಗಾರರ ಮತ್ತು ಅಭಿಮಾನಿಗಳ ಮನಸ್ಸಿಗೆ ಬಿದ್ದಿದೆ. ಈ ಕಾರಣದಿಂದ ಬಿಸಿಸಿಐ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಿಥ್ಯ ಹಕ್ಕನ್ನು ಹಿಂತೆಗೆದುಕೊಂಡಿತು. ಆ ಘಟನೆ ನಂತರ, ಆ ಸ್ಥಳದಲ್ಲಿ ಒಂದೇ ಒಂದು ಪಂದ್ಯವೂ ಆಯೋಜಿಸಲ್ಪಟ್ಟಿಲ್ಲ.

ಈ ಬಾರಿ ಹರಾಜಿನಲ್ಲಿ ಕೊನೆಯ ಕ್ಷಣದಲ್ಲಿ 19 ಆಟಗಾರರನ್ನು ಸೇರಿಸಲಾಗಿದೆ. ಇದರಿಂದ ಹರಾಜಿಗೆ ಹೆಚ್ಚಿನ ಉತ್ಸಾಹ, ಗಮನ ಮತ್ತು ಚರ್ಚೆ ಬಂದಿದೆ. ವಿಶೇಷವಾಗಿ, ಅಭಿಮನ್ಯು ಈಶ್ವರನ್ ಹರಾಜಿನಲ್ಲಿ ಸೇರ್ಪಡೆಗೊಂಡಿದ್ದಾರೆ. ಭಾರತೀಯ ಟೆಸ್ಟ್ ತಂಡದಿಂದ ಅವರನ್ನು ಹೊರಗಿಟ್ಟ ಬಳಿಕ ಅವರು ಐಪಿಎಲ್ ಮೂಲಕ ಮತ್ತೆ ಅವಕಾಶ ಪಡೆಯುತ್ತಿರುವುದು ಗಮನ ಸೆಳೆಯುತ್ತಿದೆ.

ಮಣಿಶಂಕರ್ ಮುರಾ ಸಿಂಗ್, ವಿರಂದೀಪ್ ಸಿಂಗ್ (ಮಲೇಷ್ಯಾ), ಚಾಮಾ ಮಿಲಿಂದ್, ಕೆಎಲ್ ಶ್ರೀಜಿತ್, ಈಥನ್ ಬಾಷ್ (ದಕ್ಷಿಣ ಆಫ್ರಿಕಾ), ಕ್ರಿಸ್ ಗ್ರೀನ್ (ಆಸ್ಟ್ರೇಲಿಯಾ), ಸ್ವಸ್ತಿಕ್ ಚಿಕಾರಾ, ರಾಹುಲ್ ರಾಜ್ ನಾಮಲಾ, ವಿರಾಟ್ ಸಿಂಗ್, ತ್ರಿಪುರೇಶ್ ಸಿಂಗ್, ಕೈಲ್ ವೆರ್ರೆನ್ (ದಕ್ಷಿಣ ಆಫ್ರಿಕಾ), ಬ್ಲೆಸಿಂಗ್ ಮುಜರಬಾನಿ (ಜಿಂಬಾಬ್ವೆ), ಬೆನಿಯಾಸ್, ಜೈನ್, ಸೂರಜ್ ಸಂಗರಾಜು, ತನ್ಮಯ್ ಅಗರ್ವಾಲ್ ಮತ್ತು ಅಭಿಮನ್ಯು ಈಶ್ವರನ್ ಕೊನೆಯ ಕ್ಷಣದಲ್ಲಿ ಸೇರ್ಪಡೆಯಾದ ಪ್ರಮುಖ ಆಟಗಾರರಾಗಿದ್ದಾರೆ.

error: Content is protected !!