ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ವ್ಯಕ್ತಿಯೋರ್ವ ಕಾರು ಢಿಕ್ಕಿಯಾಗಿ ಮೃತಪಟ್ಟ ಘಟನೆ ಯೆಯ್ಯಾಡಿಯಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಫೆಡ್ರಿಕ್ ಅಲ್ವಿನ್ ಫೆರ್ನಾಂಡಿಸ್ ಮೃತ ಯುವಕ.
ಫೆಡ್ರಿಕ್ ಅಲ್ವಿನ್ ಫೆರ್ನಾಂಡಿಸ್ ಯೆಯ್ಯಾಡಿಯ ತನ್ನ ಫ್ಲ್ಯಾಟ್‌ನಿಂದ ಎದುರುಗಡೆ ಇರುವ ಅಂಗಡಿಗೆ ಹಾಲು ತರಲೆಂದು ಹರಿಪದವು ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟುತ್ತಿದ್ದಾಗ ಯೆಯ್ಯಾಡಿ ಕಡೆಯಿಂದ ಚಾಲಕಿ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಫೆಡ್ರಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಮೃತಪಟ್ಟರು.