ಬಂಟ್ವಾಳ : ನುಸುರತ್ ಮಿಲಾದುನ್ನಾಭಿ ಸಂಘ (ರಿ) ಶಾಂತಿಅಂಗಡಿ ಬಿ.ಸಿ.ರೋಡ್ ಇದರ ವಾರ್ಷಿಕ ಮಹಾಸಭೆಯು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತ ಬೈಲ್ ಇದರ ಮುದರ್ರಿಸರಾದ ಬಹು ಉಮರುಲ್ ಫಾರೂಕ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಮಜಲ್, ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಶಾಂತಿ ಅಂಗಡಿ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಎಸ್, ಕೋಶಧಿಕಾರಿಯಾಗಿ ಅಬೂಬಕ್ಕರ್ ಕರಾವಳಿ, ಉಪಾಧ್ಯಕ್ಷರಾಗಿ ಸಾಹುಲ್ ಅದ್ದೇಡಿ, ಸಾದಿಕ್ ತಾಳಿಪಡ್ಪು ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಆದಂ ಪಲ್ಲ, ಇಸ್ಮಾಯಿಲ್ ಪಲ್ಲ ಹಾಗೂ ಲೆಕ್ಕ ಪರಿಶೋಧಕರಾಗಿ ಹಮೀದ್ ಪಲ್ಲ ಮತ್ತು ಕಾರ್ಯಕಾರಿ ಸಮಿತಿಯಲ್ಲಿ 12 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಶ್ರಫ್ ಎಸ್ ಸ್ವಾಗತಿಸಿ, ಇಸ್ಮಾಯಿಲ್ ಪಲ್ಲ ಧನ್ಯವಾದವಿತ್ತರು.