ಸುರತ್ಕಲ್: ಅಪ್ರಾಪ್ತ ವಯಸ್ಸಿನ ತನ್ನ ದೊಡ್ಡಪ್ಪನ ಮಗಳನ್ನು ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಡೆದಿದೆ.

ಆರೋಪಿಯನ್ನು ವಿಠಲ ಕಂಬಾರ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ರಾಘಾಪುರ ಗ್ರಾಮದ ಪ್ರಸ್ತುತ ಸುರತ್ಕಲ್ ಕುಳಾಯಿ ವಿಷ್ಣು ಮೂರ್ತಿ ದೇವಸ್ಥಾನದ ಬಳಿಯ ನಿವಾಸಿ.
ಸಂತ್ರಸ್ಥೆ ಬಾಲಕಿಯು ಆರೋಪಿಯ ದೊಡ್ಡಪ್ಪನ ಮಗಳಾಗಿದ್ದು, ಎರಡೂ ಕುಟುಂಬಗಳು ಕುಳಾಯಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿತ್ತು. ಬಾಲಕಿ ನಿರಾಕರಿಸಿದರೂ ಅವಳನ್ನು ಬೆದರಿಸಿ, ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡು ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ್ದಾನೆ. ಈ ವಿಚಾರವನ್ನು ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಬಾಲಕಿಯ ತಾಯಿ ಸುರತ್ಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿದ್ದಾರೆ.
ಸಂತ್ರಸ್ಥೆಯ ತಾಯಿಯ ದೂರಿನ ಮೇರೆಗೆ ಸುರತ್ಕಲ್ ಪೊಲೀಸರು ಪೊಕ್ಸೊ ಮತ್ತು ಭಾರತೀಯ ನ್ಯಾಯ ಸಂಹಿತ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.