ಮಂಗಳೂರು: ಕಾಂತಾರ ನಟ ರಿಷಬ್ ಶೆಟ್ಟಿ ಇತ್ತೀಚೆಗೆ ನಡೆಸಿದ ಹರಕೆಯ ನೇಮದಲ್ಲಿ ದೈವ ನರ್ತಕ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ- ವಿರೋಧ ಚರ್ಚೆ ಆರಂಭವಾಗಿದೆ.

ಕಾಂತಾರ ಚಾಪ್ಟರ್ 1 ಚಿತ್ರದ ಯಶಸ್ವಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ತಂಡ ಮಂಗಳೂರಿನ ಬಾರೆಬೈಲು ಜಾರಂದಾಯ ಬಂಟ ಹಾಗೂ ವರಾಹ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮ ಸಲ್ಲಿಸಿದ್ದರು.

ನೇಮದ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ಸಂಪ್ರದಾಯವಿದೆ. ಈ ವೇಳೆ ದೈವ ನರ್ತಕ ತುಳುನಾಡಿನ ಸಂಪ್ರದಾಯ ಮೀರಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಯಾ ವ್ಯಕ್ತವಾಗುತ್ತಿದೆ.

ಈ ವೇಳೆ ದೈವ ನರ್ತಕ ರಿಷಬ್ ಕಾಲ ಮೇಲೆ ಆಶೀರ್ವಾದ ಪಡೆಯುವಂತೆ ಮಲಗಿದ್ದಾಗಿ ಆರೋಪ ವ್ಯಕ್ತವಾಗಿದೆ. ಎಣ್ಣೆಬೂಳ್ಯ ತೆಗೆದುಕೊಳ್ಳುವಾಗ ಈ ರೀತಿಯ ಪದ್ಧತಿ ಇಲ್ಲ ಎನ್ನುವುದು ಕೆಲವರ ಅಭಿಪ್ರಾಯ. ದೈವ ನರ್ತಕ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಬಹುದು ಎಂದು ಆರೋಪಿಸಲಾಗುತ್ತಿದೆ.
