ಬೆಂಗಳೂರು: ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲನಗರದ ಮನೆಯೊಂದರಲ್ಲಿ ಗ್ಯಾಸ್ ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿ ನಾಲ್ಕು ವರ್ಷದ ಮಗ ಸೇರಿ ತಾಯಿ ಕೂಡ ಸಾವನ್ನಪ್ಪಿರುವಂತಹ ಘಟನೆ ಸೋಮವಾರ(ಡಿ.8) ರಾತ್ರಿ ನಡೆದಿದೆ.

ಚಾಂದಿನಿ(26) ಮತ್ತು ಕಿರಣ್(4) ಮೃತ ದುರ್ದೈವಿಗಳು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.