ಕಿಚ್ಚ ಸುದೀಪ್‌ ʼಮಾರ್ಕ್‌ʼ ಚಿತ್ರದ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್ !

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ “ಮಾರ್ಕ್‌” ಚಿತ್ರದ ಟ್ರೇಲರ್‌ ಬಿಡುಗಡೆಯ ಕುರಿತು ಚಿತ್ರ ತಂಡದಿಂದ ಇದೀಗ ಬಿಗ್‌ ಅಪ್ಡೇಟ್ಸ್‌ ಹೊ ಬಿದ್ದಿದೆ. ಕಿಚ್ಚ ಸುದೀಪ್‌ ಅಭಿನಯದ “ಮಾರ್ಕ್” ಸಿನಿಮಾದ ಟೀಸರ್ ಈಗಾಗಲೇ ದಾಖಲೆ‌ ಬರೆದಿದೆ. ಟೀಸರ್‌ ನಲ್ಲಿ ಕಿಚ್ಚನ ಆಕ್ಷನ್ ಖದರ್ ನೋಡಿ ಥ್ರಿಲ್ ಆಗಿರುವ ಅಭಿಮಾನಿಗಳಿಗೆ “ಮಾರ್ಕ್‌” ಚಿತ್ರತಂಡ ಬಿಗ್‌ ನ್ಯೂಸ್‌ ನೀಡಿದೆ.

ಇತ್ತೀಚೆಗಷ್ಟೇ ʼಮಾರ್ಕ್‌ʼ ಚಿತ್ರದ ಶೂಟಿಂಗ್‌ ಮುಕ್ತಾಯ ಕಂಡಿದೆ. ಟೀಸರ್‌, ಹಾಡು ರಿಲೀಸ್‌ ಬಳಿಕ ಈಗ ಚಿತ್ರ ತಂಡದ ಟ್ರೇಲರ್‌ ರಿಲೀಸ್‌ ಮಾಡಲು ಸಿದ್ದವಾಗಿದೆ. ಇತ್ತೀಚಿಗಷ್ಟೇ ಸುದೀಪ್‌ ಶೀಘ್ರದಲ್ಲೇ ʼಮಾರ್ಕ್ʼ ಟ್ರೇಲರ್‌ ರಿಲೀಸ್‌ ಆಗುವುದಾಗಿ ಹೇಳಿದ್ದರು. ಅದರಂತೆ ಇಂದು (ಡಿ.6) ಟ್ರೇಲರ್‌ ರಿಲೀಸ್‌ ಡೇಟ್ & ಟೈಮ್‌ ರಿವೀಲ್‌ ಮಾಡಲಾಗಿದೆ.

ಭಾನುವಾರ (ಡಿ.7) ಬೆಳಗ್ಗೆ 11:58ಕ್ಕೆ ʼಮಾರ್ಕ್‌ʼ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ. ಸಿಗರೇಟ್‌ ಎಳೆದುಕೊಂಡು, ಮಾಸ್‌ ಲುಕ್‌ನಲ್ಲಿ ನಿಂತಿರುವ ಕಿಚ್ಚನ ಪೋಸ್ಟರ್‌ ರಿಲೀಸ್‌ ಮಾಡಿ, ಚಿತ್ರತಂಡ ಟ್ರೇಲರ್‌ ಡೇಟ್‌ ಅನೌನ್ಸ್‌ಮೆಂಟ್‌ ಮಾಡಿದೆ.

‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ಮೋಡಿ ಬಂದು ಹಿಟ್‌ ಲಿಸ್ಟ್‌ಗೆ ಸೇರಿತ್ತು. ಈಗ ಅದೇ ಜೋಡಿ ʼಮಾರ್ಕ್ʼ ಮೂಲಕ ಬರುತ್ತಿದ್ದಾರೆ. ಈ ಬಾರಿ ಕೂಡ ಕಿಚ್ಚ ʼಮ್ಯಾಕ್ಸ್‌ʼ ಚಿತ್ರದಲ್ಲಿ ಕಾಣಿಸಿಕೊಂಡಿರುವಂತೆಯೇ “ಮಾರ್ಕ್” ಚಿತ್ರದಲ್ಲಿ ಕೂಡ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

error: Content is protected !!