ಪ್ರಾರ್ಥನೆಗೆ ಲೌಡ್‌ ಸ್ಪೀಕರ್‌ ಕಡ್ಡಾಯವಲ್ಲ: ಮಸೀದಿಯಲ್ಲಿ ಧ್ವನಿವರ್ಧಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ನಾಗಪುರ : ಧಾರ್ಮಿಕ ಮಂದಿರಗಳಲ್ಲಿ ಧ್ವನಿವರ್ಧಕ ಕುರಿತ ವಿಚಾರವಾಗಿ ಹೈ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಾರ್ಥನೆಗೆ ಸ್ಪೀಕರ್ ಕಡ್ಡಾಯವಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ಮಸೀದಿಯಲ್ಲಿ ಧ್ವನಿ ವರ್ಧಕ ಬಳಸುವುದಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ವಜಾಗೊಳಿಸಿದ್ದು, ಇದೇ ವೇಳೆ ಯಾವುದೇ ಧರ್ಮವು ಧ್ವನಿವರ್ಧಕಗಳನ್ನು ಬಳಸಿ ಪ್ರಾರ್ಥನೆ ಮಾಡುವುದು ಕಡ್ಡಾಯ ಎಂದಿಲ್ಲ ಎಂದು ಕೋರ್ಟ್ ಹೇಳಿದೆ.

ಗೊಂಡಿಯಾ ಜಿಲ್ಲೆಯ ಗೌಸಿಯಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧ್ವನಿ ವರ್ಧಕ ಬಳಕೆಗೆ ಅವಕಾಶ ಕೇಳಿ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ದ್ವಿಸದಸ್ಯ ಪೀಠ ಅರ್ಜಿದಾರರು ಧಾರ್ಮಿಕ ಪ್ರಾರ್ಥನೆಯಲ್ಲಿ ಧ್ವನಿವರ್ಧಕ ಬಳಕೆಯ ಅಗತ್ಯ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಅರ್ಜಿ ವಜಾ ಮಾಡ್ತಿದ್ದೇವೆ ಎಂದು ಹೇಳಿದೆ.

ಇದೇ ವೇಳೆ ಯಾವುದೇ ಧರ್ಮವು ಧ್ವನಿವರ್ಧಕ ಡ್ರಮ್ ಬಾರಿಸುವ ಮೂಲಕ ಪ್ರಾರ್ಥಿಸಬೇಕೆಂದು ಹೇಳುವುದಿಲ್ಲ ಎನ್ನುವ ಸುಪ್ರೀಂ ಕೋರ್ಟ್ ತೀರ್ಪನ್ನು ನ್ಯಾಯಾಲಯ ಪುನರುಚ್ಚರಿಸಿದೆ.

error: Content is protected !!