ನಾಸಾ ವಿಜ್ಞಾನಿಗಳು ʻಬೆನ್ನುʼ ಎಂಬ ಹೆಸರಿನ ಕ್ಷುದ್ರಗ್ರಹದಿಂದ ಪಡೆದ ಮಾದರಿಗಳಲ್ಲಿ ಜೀವಕ್ಕೆ ಅಗತ್ಯವಾದ ಸಕ್ಕರೆಗಳು, ನಿಗೂಢ ‘ಗಮ್’ ತರಹದ ವಸ್ತು ಹಾಗೂ ನಕ್ಷತ್ರಧೂಳಿ(ಬ್ರಹ್ಮಾಂಡದ ಅತ್ಯಂತ ಹಳೆಯ ವಸ್ತು) ಪತ್ತೆಹಚ್ಚಿದ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. 2023ರಲ್ಲಿ OSIRIS–REx ಮಿಷನ್ ಭೂಮಿಗೆ ತಂದಿದ್ದ ಶುದ್ಧ ಬಾಹ್ಯಾಕಾಶ ಮಾದರಿಗಳಲ್ಲಿ ಇವುಗಳು ಪತ್ತೆಯಾಗಿದ್ದಾಗಿ Nature Geosciences ಮತ್ತು Nature Astronomy ಜರ್ನಲ್‌ಗಳಲ್ಲಿ ಪ್ರಕಟವಾಗಿವೆ.

ಜೀವಿಗಳು ಬದುಕಲು ರಾಸಾಯನಿಕ ಆಧಾರವಾಗಿರುವುದು ಎಂದರೆ ಪ್ರಮುಖವಾಗಿ ಸಕ್ಕರೆ ಎನ್ನುವುದು ಗೊತ್ತೇ ಇದೆ. ಇದೀಗ ಬೆನ್ನುವಿನಲ್ಲಿ ಸಕ್ಕರೆ ಅಂಶ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದ್ದು, ಕ್ಷುದ್ರಗಹಗಳೂ ಭೂಮಿಯಂತೆ ಜೀವಿಗಳಿಗೆ ವಾಸಯೋಗ್ಯ ಎನ್ನುವುದು ಸಾಬೀತಾಗುವಂತಿದೆ. ಬಾಹ್ಯಾಕಾಶ ಮೂಲದ ಮಾದರಿಯಲ್ಲಿ ಮೊದಲ ಬಾರಿಗೆ, ವಿಜ್ಞಾನಿಗಳು ರೈಬೋಸ್ (RNAಗೆ ಅವಶ್ಯಕ ಐದು-ಕಾರ್ಬನ್ ಸಕ್ಕರೆ), ಗ್ಲೂಕೋಸ್ (ಭೂಮಿಯ ಜೀವಕೋಶಗಳಿಗೆ ಶಕ್ತಿ ನೀಡುವ ಆರು-ಕಾರ್ಬನ್ ಸಕ್ಕರೆ) ಪತ್ತೆಹಚ್ಚಿದ್ದಾರೆ.
ಇವನ್ನು ಪತ್ತೆಹಚ್ಚಿದ್ದಾರೆ.
ಈ ಸಕ್ಕರೆಗಳು ಜೀವನದ ಪುರಾವೆಯಾಗದಿದ್ದರೂ, ಹಿಂದಿನಿಂದಲೇ ಪತ್ತೆಯಾದ ಅಮಿನೋ ಆಮ್ಲಗಳು, ನ್ಯೂಕ್ಲಿಯೊಬೇಸ್‌ಗಳು, ಕಾರ್ಬಾಕ್ಸಿಲಿಕ್ ಆಮ್ಲಗಳು ಇವುಗಳೊಂದಿಗೆ ಸೇರಿ, ಪ್ರಾರಂಭಿಕ ಸೌರವ್ಯೂಹದಲ್ಲಿ ವಾಯೋಗ್ಯ ಕ್ಷುದ್ರಗ್ರಹಗಳು ವ್ಯಾಪಕವಾಗಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪುರಾಣಗಳಲ್ಲಿ ಬರುವ ಕೆಲವೊಂದು ರಾಕ್ಷಸರು ಅಂತರಿಕ್ಷದಲ್ಲಿ ವಾಸಿಸುತ್ತಿದ್ದರು ಎನ್ನುವುದಕ್ಕೆ ಇದೊಂದು ರೀತಿ ಪುಷ್ಠಿ ಒದಗಿಸುತ್ತಿದೆ.
“ಈ ಸಕ್ಕರೆಗಳ ಪತ್ತೆಯಿಂದ ಜೀವಕ್ಕೆ ಅಗತ್ಯವಾದ ಪ್ರಮುಖ ಪದಾರ್ಥಗಳ ಪಟ್ಟಿಯು ಪೂರ್ಣಗೊಂಡಂತಾಗಿದೆ. RNA ನಿರ್ಮಾಣಕ್ಕೆ ಬೇಕಾದ ಎಲ್ಲಾ ಘಟಕಗಳು ಈಗ ಬೆನ್ನುವಿನಲ್ಲಿ ಇರುವುದನ್ನು ನಾವು ದೃಢಪಡಿಸಿದ್ದೇವೆ,” ಎಂದು ಟೊಹೊಕು ವಿಶ್ವವಿದ್ಯಾಲಯದ ಡಾ. ಯೋಶಿಹಿರೊ ಫುರುಕಾವಾ ಹೇಳಿದರು.
ಬಾಹ್ಯಾಕಾಶದಿಂದ ಬಂದ ನಿಗೂಢ ‘ಗಮ್’ ವಸ್ತು — ವಿಜ್ಞಾನಕ್ಕೆ ಹೊಸ ಕುತೂಹಲ ಮೂಡಿಸಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜಾಕ್ ಗೇನ್ಸ್‌ಫೋರ್ತ್ ಅವರ ತಂಡ ಬೆನ್ನುವಿನಲ್ಲಿ
ಪಾಲಿಮರ್ ತರಹದ, ‘ಗಮ್’ ಆಕಾರದ ರಾಸಾಯನಿಕ ವಸ್ತುವೊಂದು ಪತ್ತೆಹಚ್ಚಿದೆ—ಇದು ಬಾಹ್ಯಾಕಾಶ ಕಲ್ಲುಗಳಲ್ಲಿ ಇಂದಿನವರೆಗೆ ಕಂಡುಬಾರದ ವಿಚಿತ್ರ ಪದಾರ್ಥ. ಈ ವಸ್ತು ಸಾರಜನಕ, ಆಮ್ಲಜನಕಗಳಿಂದ ಸಮೃದ್ಧವಾಗಿದೆ. ಅಲ್ಲದೆ ಸರಪಳಿಗಳಿಂದ ನಿರ್ಮಿತವಾಗಿದೆ. ಹೀಗಾಗಿ ಇದು ಕ್ಷುದ್ರಗ್ರಹದ ಪ್ರಾರಂಭಿಕ ಅವಧಿಯಲ್ಲಿಯೇ ರೂಪುಗೊಂಡಿರುವ ಸಾಧ್ಯತೆ. ಹಾಗಾಗಿ ಇದರಲ್ಲಿ ಮೊದಲಿನಿಂದಲೂ ಜೀವವೈವಿಧ್ಯ ಇರುವ ಸಾಧ್ಯತೆ ದಟ್ಟವಾಗಿದೆ.

ಬೆನ್ನುವಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ನಕ್ಷತ್ರಧೂಳಿ ಹಾಗೂ ಪೂರ್ವಸೌರಿಕ ಸಿಲಿಕೇಟ್ ವಸ್ತುಗಳು ಕಂಡುಬಂದಿದೆ. ಮೂಲ ಕ್ಷುದ್ರಗ್ರಹದಲ್ಲಿ ನಡೆದ ಜಲಚಟುವಟಿಕೆಗಳಿಂದ ಬದಲಾಗದೆ ಉಳಿದಿರುವ ಈ ಕಣಗಳು ಇದಾಗಿದೆ. ಇದರಿಂದ ಸೌರವ್ಯೂಹ ರಚನೆ, ಆರಂಭಿಕ ವಸ್ತುಗಳ ವೈವಿಧ್ಯತೆ ಪತ್ತೆಹಚ್ಚಲು ಸಾಧ್ಯ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಈ ಪತ್ತೆಗಳು ಆರಂಭಿಕ ಸೌರವ್ಯೂಹದಾದ್ಯಂತ ಜೀವಕ್ಕೆ ಅಗತ್ಯವಾದ ಮೂಲರಾಸಾಯನಿಕಗಳು ಅತ್ಯಂತ ಸಾಮಾನ್ಯವಾಗಿದ್ದವು ಎಂಬುದನ್ನು ಸೂಚಿಸುತ್ತವೆ.
ಹೀಗಾಗಿ ಮಂಗಳ, ಗುರುಗ್ರಹದ ಹಿಮಾವೃತ ಉಪಗ್ರಹ ಯುರೋಪಾ ಮುಂತಾದ ಸ್ಥಳಗಳ ಮೇಲೂ ಇದೇ ತರದ ಜೀವಘಟಕಗಳು ಬೀಜವಾಗಿದ್ದಿರಬಹುದೆಂಬ ಶಂಕೆ ಬಲಗೊಂಡಿದೆ.
“OSIRIS-REx ಯಾನವು ಬೆನ್ನು ಮೇಲೆಯೇ ಮಾದರಿಯನ್ನು ಸ್ಕೂಪ್ ಮಾಡಿ ನೇರವಾಗಿ ಬಾಹ್ಯಾಕಾಶದಲ್ಲೇ ಮುಚ್ಚಿದ ಕಾರಣ, ಅದು ಭೂಮಿಯ ವಾತಾವರಣ ಅದಕ್ಕೆ ಸ್ಪರ್ಷ ಕೂಡ ಆಗಿಲ್ಲ. ಹೀಗಾಗಿ ಕ್ಷುದ್ರಗ್ರಹದಲ್ಲಿ ಮಣ್ಣು, ಗಾಳಿ, ತೇವದಿಂದ ಕಲುಷಿತವಾಗದ ಶುದ್ಧ ಬಾಹ್ಯಾಕಾಶ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಲು ಇದು ಅಪರೂಪದ ಅವಕಾಶ,” ಎಂದು ನಾಸಾದ ಖಗೋಳಜೀವಶಾಸ್ತ್ರಜ್ಞ ಡ್ಯಾನಿ ಗ್ಲಾವಿನ್ ಹೇಳಿದ್ದಾರೆ.