ಸಸಿಹಿತ್ಲು: ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಭವ್ಯ ಹೊರೆ ಕಾಣಿಕೆ ಸಮರ್ಪಣೆ

ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4ರಿಂದ 8ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹೊರೆ ಕಾಣಿಕೆ ಭವ್ಯ ಶೋಭಾ ಯಾತ್ರೆ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನದಿಂದ ಶ್ರೀ ಸಸಿಹಿತ್ಲು ಭಗವತೀ ಕ್ಷೇತ್ರಕ್ಕೆ ನಡೆಯಿತು.

 ಶೋಭಾ ಯಾತ್ರೆಯನ್ನು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರದ ಯಾಜೀ ನಿರಂಜನ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ, ಮುಕ್ಕ ಶ್ರೀ ಸತ್ಯ ಧರ್ಮ ದೇವಿ ದೇವಸ್ಥಾನದ ಗಣೇಶ್ ಐತಾಳ್, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಎಸ್ ಜಿ ಮಯ್ಯ, ಕರ್ನಾಟಕ ಸರಕಾರದ ಮಾಜೀ ಸಚಿವ ನಾಗರಾಜ ಶೆಟ್ಟಿ ಬಿಜೆಪಿ ನಾಯಕ ಸುದರ್ಶನ್ ಮೂಡಬಿದ್ರೆ, ಭುವನಾಭಿರಾಮ ಉಡುಪ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಬ್ರಹ್ಮ ಕಲಶೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್ ಶ್ರಿಯಾನ್, ಮೊಕ್ತೇಸರ ಚಂದ್ರಶೇಖರ ಬೆಲ್ಚಡ,ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಬಂಗೇರ, ಚಂದ್ರಶೇಖರ ನಾಣಿಲ್, ಜಯಕೃಷ್ಣ ಕೋಟ್ಯಾನ್, ಉಮೇಶ್ ಪಂಜ, ದಿವಾಕರ ಸಾಮಾನಿ, ಅಭಿಲಾಶ್ ಶೆಟ್ಟಿ ಕಟೀಲು, ವಿನೋದ್ ಸಾಲ್ಯಾನ್ ಬೆಳ್ಳಾಯರು, ರಾಜೇಶ್ ಕೆರೆ ಕಾಡು, ಲಕ್ಷ್ಮಣ ಸಾಲ್ಯಾನ್ ಪುನರೂರು, ಶೋಭೆಂದ್ರ ಸಸಿಹಿತ್ಲು, ಕಿರಣ್ ಗುರಿಕಾರ, ಗಣೇಶ್ ಕದಿಕೆ ಭಂಡಾರ ಮನೆ, ಸುಶೀಲ್ ಬಂಗೇರ ಮುಲ್ಕಿ, ವಿನೋದ್ ಬೊಳ್ಳೂರು, ರಾಜೇಂದ್ರ ಪ್ರಸಾದ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.


ನವೀನ್ ಶೆಟ್ಟಿ ಎಡ್ಮೆ ಮಾರ್ ನಿರೂಪಿಸಿದರು. ಬಳಿಕ ವಿವಿಧ ಬಿರುದಾವಳಿಗಳೊಂದಿಗೆ ಬೃಹತ್ ಹೊರೆ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ಮಧ್ಯಾಹ್ನ 12:30 ರಿಂದ ಕ್ಷೇತ್ರದಲ್ಲಿ ಮಹಾ ಅನ್ನಸಂತರ್ಪಣೆ , ಸಂಜೆ 4:30 ರಿಂದ ವಾಸ್ತು ಪೂಜೆ ವಾಸ್ತು ಬಲಿ ಪ್ರಾಸಾದ ಶುದ್ಧಿ ವಾಸ್ತು ಹೋಮ ರಾಕ್ಷೋಘ್ನ ಹೋಮ ಹಾಗೂ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಆಗಮನ ಕಾರ್ಯಕ್ರಮ ನಡೆಯಿತು.

error: Content is protected !!