ಸಚಿನ್ ತೆಂಡುಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ರಾಯಪುರ: ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್‌ ಕೊಹ್ಲಿ, 93 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 102 ರನ್‌ ಗಳಿಸಿದರು. ಈ ಮಾದರಿಯಲ್ಲಿ ಕೊಹ್ಲಿ ಅವರ 53ನೇ ಶತಕವಾಗಿದೆ.

ನವೆಂಬರ್‌ 30ರಂದು ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿಯೂ ಮೂರಂಕಿ ದಾಟಿದ್ದ ಕೊಹ್ಲಿ, 11ನೇ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಈ ರೀತಿ ಸತತ ಶತಕ ಸಿಡಿಸಿದ್ದು “ಮಿಸ್ಟರ್‌ 360” ಖ್ಯಾತಿ ಎಬಿ ಡಿ ವಿಲಿಯರ್ಸ್‌ 6 ಸಲ ಇಂತಹ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್‌ ಲೋಕದ “ಕಿಂಗ್‌” ಎನಿಸಿಕೊಂಡಿರುವ ಕೊಹ್ಲಿ, ಈ ಪಂದ್ಯದಲ್ಲಿ ಋತುರಾಜ್‌ ಗಾಯಕವಾಡ (105) ಅವರೊಂದಿಗೆ ಸೇರಿ 4ನೇ ವಿಕೆಟ್‌ ಪಾಲುದಾರಿಕೆಯಲ್ಲಿ 195 ರನ್‌ ಕಲೆಹಾಕಿದರು. ಇದರೊಂದಿಗೆ 33ನೇ ಸಲ 150ಕ್ಕಿಂತ ಅಧಿಕ ರನ್‌ ಜೊತೆಯಾಟದಲ್ಲಿ ಪಾಲ್ಗೊಂಡರು. ಈ ರೀತಿಯ ಪಾಲುದಾರಿಕೆಯಲ್ಲಿ ಕೊಹ್ಲಿಗೆ ಜೊತೆಯಾದ 14ನೇ ಆಟಗಾರ ಗಾಯಕವಾಡ.

ಅತಿಹೆಚ್ಚು (32) ಸಲ ಇಂತಹ ಜೊತೆಯಾಟವಾಡಿದ ದಾಖಲೆ ಇದುವರೆಗೆ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿತ್ತು, ಅದನ್ನೀಗ ವಿರಾಟ್‌ ಕೊಹ್ಲಿ ಮುರಿದಿದ್ದಾರೆ.

error: Content is protected !!