ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ: ಮೂವರಿಗೆ ಗಾಯ

ಕಾರ್ಕಳ: ಕಾರ್ಕಳದಿಂದ ಹೆಬ್ರಿ ಕಡೆಗೆ ಚಲಿಸುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.

ಕಾರ್ಕಳದ ಪಂಚಾಯತ್ ರಾಜ್ ವಿಭಾಗದ ಇಂಜಿನಿಯರ್ ಸದಾನಂದ ನಾಯ್ಕ್ ಹಾಗೂ ಪತ್ನಿ ಮಗು ಅಪಘಾತಕ್ಕೀಡಾಗಿ ಗಾಯಗೊಂಡವರು.

ಹಿರ್ಗಾನ ಗ್ರಾಮದ ಮೂರೂರು ಬಳಿ ಸದಾನಂದ ನಾಯ್ಕ್ ಅವರು ತನ್ನ ಕಾರಿನಲ್ಲಿ ಪತ್ನಿ ಹಾಗೂ ಮಗುವಿನ ಜೊತೆ ತಮ್ಮ ಮನೆ ಬ್ರಹ್ಮಾವರದ ಚಾಂತಾರಿಗೆ ಹೊರಟಿದ್ದರು. ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯ ಮುರೂರು ಬಳಿ ಏಕಾಏಕಿ ಸೈಕಲ್ ಸವಾರ ಅಡ್ಡಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಹೈಟೆನ್ಷನ್ ಕಂಬಕ್ಕೆ ಡಿಕ್ಕಿಯಾಗಿದೆ.

ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!