ಇಡೀ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಖೈದಿ!: ಯಾವುದೇ ಕ್ಷಣದಲ್ಲಿ ಅಂತರ್ಯುದ್ಧ ಸ್ಫೋಟ ಸಂಭವ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಡಿಯಾಲಾ ಜೈಲಿನೊಳಗೆ ನಿಧನರಾದರೆಂದು ನವೆಂಬರ್ 27ರಂದು ಹರಿದ ವದಂತಿ ದೇಶವ್ಯಾಪಕ ಆತಂಕಕ್ಕೆ ಕಾರಣವಾಗಿದ್ದು, ಆ ದೇಶದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಖಾನ್‌ ಸಾವಿರಾರು ಬೆಂಬಲಿಗರು ಜೈಲಿನ ಹೊರಭಾಗದಲ್ಲಿ ನಿಂತಿದ್ದು, ಆಂತರಿಕ ಯುದ್ಧ ಭುಗಿಲೇಳುವ ಹಂತಕ್ಕೆ ಬಂದು ನಿಂತಿದೆ.

ಇಮ್ರಾನ್ ಖಾನ್ ಕಳೆದ ನಾಲ್ಕು ವಾರಗಳಿಂದ ಯಾವುದೇ ಸಾರ್ವಜನಿಕ ಸಂಪರ್ಕವಿಲ್ಲದೆ ಜೈಲಿನಲ್ಲಿದ್ದು, ಭೇಟಿಗೆ ನಿರ್ಬಂಧ, ವಕೀಲರ ಭೇಟಿ ನಿಲ್ಲಿಕೆ, ಫೋನ್‌ ಕರೆಗಳ ಸ್ಥಗಿತ ಇವೆಲ್ಲಾ ಖಾನ್‌ ಇನ್ನೂ ಬದುಕಿದ್ದಾರಾ ಸತ್ತಿದ್ದಾರಾ ಎನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ. How Asim Munir has become Pakistan’s most powerful army chief ever

ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಖಾನ್ ನಡುವಿನ ಸಂಘರ್ಷ ವರ್ಷಗಳ ಹಿಂದಿನಿಂದ ಮುಂದುವರಿದಿದೆ. ಐಎಸ್‌ಐ ಮುಖ್ಯಸ್ಥರಾಗಿದ್ದ ಕಾಲದಲ್ಲಿ ಖಾನ್ ಮುನೀರ್ ಖಾನ್ ಪತ್ನಿಗೆ ಸಂಬಂಧಿಸಿದ ಆರೋಪಗಳ ತನಿಖೆಗೆ ಮುಂದಾಗಿದ್ದರು ಎಂಬ ವರದಿಗಳಿವೆ. ನಂತರ ಪ್ರಧಾನಿಯಾಗಿದ್ದ ಖಾನ್‌ ಆಕೆಯನ್ನು ಕೇವಲ ಎಂಟು ತಿಂಗಳಲ್ಲೇ ಹುದ್ದೆಯಿಂದ ತೆಗೆಸಿದರು. ಈ ಘಟನೆ ಸೇನಾ ವಲಯದಲ್ಲಿ ಅಪಮಾನವೆಂದು ಪರಿಗಣಿಸಲ್ಪಟ್ಟಿತ್ತು.

ಪ್ರಸ್ತುತ ಸೇನಾ ಮುಖ್ಯಸ್ಥನಾಗಿರುವ ಮುನೀರ್ ಅವಧಿಯಲ್ಲಿ ಖಾನ್ ತಮ್ಮ ಬೆಂಬಲಿಗರು “ರಾಜಕೀಯ ಪ್ರೇರಿತ” ಎಂದು ಹೇಳುವ ಹಲವು ಪ್ರಕರಣಗಳಲ್ಲಿ 840 ದಿನಕ್ಕಿಂತ ಹೆಚ್ಚು ದಿನಗಳಿಂದ ಜೈಲಿನಲ್ಲಿ ಉಳಿದಿದ್ದಾರೆ.

ಇದೀಗ ಆಂತರಿಕ ದಂಗೆ, ಹತ್ಯೆ, ಉಗ್ರಗಾಮಿ ಚಟುವಟಿಕೆಗಳು ಹೆಚ್ಚಿದ್ದು, ಇದೀಗ ಖಾನ್‌ ನಿಗೂಢ ಸಾವು ವಂದಂತಿಯಿಂದ ದೇಶದಲ್ಲಿ ವ್ಯಾಪಕ ದಂಗೆ ನಡೆಯುವ ಹಂತದಲ್ಲಿದೆ. ಖಾನ್‌ ಅವರು ಸತ್ತಿದ್ದಾರೆ ಎಂದು ದೃಢವಾದರೆ ಅಥವಾ ಅವರಿಂದ ಒಂದು ವಿಡಿಯೋ ಹೊರಬಂದರೂ ದೇಶದಲ್ಲಿ ಅಂತರ್ಯುದ್ಧ ಕ್ಷಣಾರ್ಧದಲ್ಲಿ ಸಂಭವಿಸಬಹುದು.

ಈಗಾಗಲೇ ಪಾಕಿಸ್ತಾನ ಅಫ್ಘಾನಿಸ್ತಾನದೊಂದಿಗೆ ಗಡಿ ಯುದ್ಧ, ನಿರಾಶ್ರಿತರ ಹಾವಳಿ, ಬಲೂಚಿಸ್ತಾನ್ ಮತ್ತು KPಯಲ್ಲಿ ಹೆಚ್ಚುತ್ತಿರುವ ಅಭದ್ರತೆಯಿಂದ ಬಳಲುತ್ತಿದ್ದು, ಇವನ್ನೆಲ್ಲ ಎದುರಿಸುತ್ತಿರುವ ಸಮಯದಲ್ಲಿ ಖಾನ್ ವಿಚಾರದಲ್ಲಿ ಮುನೀರ್‌ ಬಾಲಿಷವಾಗಿ ವರ್ತಿಸಿದರೆ ದೇಶವನ್ನು ನಿರ್ವಹಿಸಲು ಸಾಧ್ಯವಾಗದಷ್ಟು ದೊಡ್ಡ ಅಸ್ಥಿರತೆಗೆ ಕಾರಣವಾಗಬಹುದು.

ಸಾಂವಿಧಾನಿಕ ಬದಲಾವಣೆಗಳ ಮೂಲಕ ಅಧಿಕಾರ ಬಲಪಡಿಸಿರುವ ಸೇನಾ ಮುಖ್ಯಸ್ಥ ಮುನೀರ್ ಎದುರಿಸುತ್ತಿರುವ ದೊಡ್ಡ ಸವಾಲೇ ಇಮ್ರಾನ್‌ ಖಾನ್. ಇವರು ಜೈಲಿನೊಳಗಿದ್ದರೂ ರಾಜಕೀಯ ವಾತಾವರಣವನ್ನು ಪ್ರಭಾವಿಸುತ್ತಿರುವ ಪ್ರಮುಖ ವ್ಯಕ್ತಿ ಆಗಿ ಈಗಲೂ ಹೊರಹೊಮ್ಮುತ್ತಿದ್ದಾರೆ.

-ಗಿರಿ

error: Content is protected !!