ಪತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ !

ಶಿವಮೊಗ್ಗ: ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಮದುವೆಯಾದ 6 ತಿಂಗಳಿಗೆ ನವವಿವಾಹಿತೆ ಪತಿಯ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಭದ್ರಾವತಿಯ ಹಂಚಿನ ಸಿದ್ದಾಪುರದ ನಿವಾಸಿ ಲತಾ (25) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ.

ಲತಾ 2025 ಏಪ್ರಿಲ್ 14 ರಂದು ಶಿಕಾರಿಪುರದ ಗುರುರಾಜ್ ಜೊತೆಗೆ ಲತಾ ವಿವಾಹವಾಗಿದ್ದರು. ಪತಿ ಹಾಗೂ ಮನೆಯವರ ಕಿರುಕುಳದಿಂದಾಗಿ ತಾಳಲಾರದೆ ಬೇಸತ್ತ ಲತಾ ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನವೆಂಬರ್ 23ರಂದು ಲತಾ ನಾಲೆಗೆ ಹಾರಿದ್ದು, ಸದ್ಯ ಲತಾ ಶವಕ್ಕಾಗಿ ಇದೀಗ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಡೆತ್ ನೋಟ್ ನಲ್ಲಿ ಪತಿ ಹಾಗೂ ಮನೆಯವರ ಕಿರುಕುಳದ ಬಗ್ಗೆ ಲತಾ ದೂರು ನೀಡಿದ್ದಾರೆ. ಘಟನೆ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಳಿಕ ಲತಾ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.

error: Content is protected !!