ಆಂಧ್ರಪ್ರದೇಶ: ಅಮೆರಿಕ ಮೂಲದ ಭಕ್ತ ಎಂ. ರಾಮಲಿಂಗ ರಾಜು ತಿರುಪತಿ ದೇವಸ್ಥಾನದ ಅಭಿವೃದ್ಧಿಗೆ 9 ಕೋಟಿ ದೇಣಿಗೆ ನೀಡಿದ್ದಾರೆ ಎಂದು TTD ಮಂಡಳಿಯ ಅಧ್ಯಕ್ಷ BRನಾಯ್ತು ತಿಳಿಸಿದ್ದಾರೆ. ಎಂ.ರಾಮಲಿಂಗ ರಾಜು ಎಂಬುವವರು ಪಿಎಸಿ-1, ಪಿಎಸಿ-2 ಮತ್ತು ಪಿಎಸಿ-3 ಕಟ್ಟಡಗಳ ನವೀಕರಣಕ್ಕಾಗಿ ನೀಡಿದ್ದಾರೆ.

ಅವರು ಈ ಹಿಂದೆ 2012 ರಲ್ಲಿ 16 ಕೋಟಿ ರೂ. ದೇಣಿಗೆ ನೀಡಿದ್ದರು ಎಂದು ನಾಯ್ಡು ಮಾಹಿತಿ ನೀಡಿದ್ದಾರೆ. ನಾಯ್ಡು ತಮ್ಮ ಪೋಸ್ಟ್‌ನಲ್ಲಿ, “ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು TTDಈ ಕೊಡುಗೆಗೆ ಅಭಿನಂದನೆ ಸಲ್ಲಿಸುತ್ತದೆ. ದೇವರ ಆಶೀರ್ವಾದವು ರಾಜು ಮೇಲಿರಲಿ” ಎಂದಿದ್ದಾರೆ.
