ಕುಡುಪು: ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಅಂಗವಾಗಿ ಇಂದು ಕುಡುಪು ಅನಂತಪದ್ಮನಾಭ ದೇವಾಲಯದಲ್ಲಿ ಭಕ್ತರ ದಂಡೇ ಹರಿದು ಬಂದಿದೆ. ಬೆಳಗ್ಗಿನಿಂದಲೇ ದೀರ್ಘ ಸರತಿ ಸಾಲು ರೂಪುಗೊಂಡಿದ್ದು, ದರ್ಶನಕ್ಕಾಗಿ ಹಲವು ಪ್ರದೇಶಗಳಿಂದ ಭಕ್ತರು ಆಗಮಿಸಿದರು.





ದೇವಾಲಯದಲ್ಲಿ ಪರಂಪರಾಗತ ಆಚರಣೆಗಳೊಂದಿಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರ ನೆರವೇರಿತು. ಮಧ್ಯಾಹ್ನ ಅದ್ದೂರಿಯಾಗಿ ರಥೋತ್ಸವ ಜರಗಿದ್ದು, ಭಕ್ತರು ಭಜನೆ–ಘೋಷಗಳ ನಡುವೆ ರಥವನ್ನು ಭಕ್ತಿಭಾವದಿಂದ ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ದಿನವಿಡೀ ದೇವಾಲಯ ಆವರಣದಲ್ಲಿ ಧಾರ್ಮಿಕ ಚಟುವಟಿಕೆಗಳು ಜೋರಾಗಿದ್ದು, ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬ ಸಮೇತರಾಗಿ ಬಂದ ಭಕ್ತರು ದೇವರ ದರ್ಶನ ಪಡೆದು ತೃಪ್ತರಾದರು.
ಚಿತ್ರಗಳು: ವಿಜಯ ಕುಮಾರ್ ಕುಡುಪು