ಕಡಬ: ಪತ್ನಿಯು ಒಬ್ಬ ಗೆಳೆಯನೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ ವಿಷಯ ತಿಳಿದು ಮಾನಸಿಕವಾಗಿ ನೊಂದು ವ್ಯಕ್ತಿಯೋರ್ವ ಇಲಿಪಾಶಾನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಡಬದಲ್ಲಿ ಸಂಭವಿಸಿದೆ.

ಕಡಬ ಕುಟ್ರುಪ್ಪಾಡಿ ನಿವಾಸಿ ರಾಕೇಶ್ (36) ಎಂಬಾತ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದುರ್ದೈವಿ.
ದೂರುದಾದ ಕಡಬದ ಕುಟ್ರುಪ್ಪಾಡಿ, ನಿವಾಸಿ ಸೊಲೊಮೊನ್ (54) ಪ್ರಕಾರ—ರಾಕೇಶ್ ಕಡಬದ ಕಳಾರ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ನಡೆಸುತ್ತಿದ್ದರು. ಇವರ ಪತ್ನಿ ಮತ್ತು ಮತ್ತೊಬ್ಬ ಗೆಳೆಯನ ನಡುವಿನ ಮೊಬೈಲ್ ಸಂಪರ್ಕದ ಬಗ್ಗೆ ತಿಳಿದುಕೊಂಡ ರಾಕೇಶ್ ತೀವ್ರ ಬೇಸರಗೊಂಡಿದ್ದರು.
ನವೆಂಬರ್ 19ರಂದು ಸಂಜೆ, ರಾಕೇಶ್ ಕಡಬ ಬಜಾಜ್ ಶೋ ರೂಂ ಹಿಂಭಾಗದಲ್ಲಿ ಅಮಲು ಪದಾರ್ಥದ ಜೊತೆ ಇಲಿಪಾಷಾನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ದೂರುದಾರರ ದೊಡ್ಡ ಮಗ ರಾಜೇಶ್ ಮಂಗಳೂರಿನ ಫಾ. ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆಗೆ ಸ್ಪಂದಿಸದ ರಾಕೇಶ್ ನವೆಂಬರ್ 26ರಂದು ಮೃತಪಟ್ಟಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 35/2025, ಕಲಂ 194(3)(iv) BNSS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.