ಮಂಗಳೂರು: WENAMITAA (NMAMIT ಹಳೆಯ ವಿದ್ಯಾರ್ಥಿಗಳ ಸಂಘ) ಮತ್ತು Nitte Mahalinga Adyanthaya Memorial Institute of Technology (NMAMIT), ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ “Nitte Nexus 2025” ಡಿಸೆಂಬರ್ 20, 2025 ರಂದು ಸಂಜೆ 4 ಗಂಟೆಯಿಂದ ಮುಲ್ಕಿಯ ಸುಂದರ ರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮುಲ್ಕಿ ಜೀವನ್ ಕೆ. ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 1986ರಲ್ಲಿ ಸ್ಥಾಪಿತವಾದ NMAMIT ಈಗ 40ನೇ ವರ್ಷದ ಸೇವೆ ಹಾಗೂ ಶ್ರೇಷ್ಠತೆಯ ಪಯಣಕ್ಕೆ ಕಾಲಿಡುತ್ತಿದ್ದು, ವಿಶ್ವದಾದ್ಯಂತ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 25,000ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಬಲಿಷ್ಠ ಜಾಲವನ್ನು ಹೊಂದಿದೆ ಎಂದು ಹೇಳಿದರು.
ಹಳೆಯ ಸ್ನೇಹಿತರೊಂದಿಗೆ ಪುನರ್‌ಸಂಪರ್ಕ, ವೃತ್ತಿ ನೆಟ್ವರ್ಕಿಂಗ್, ಸ್ಮೃತಿಗಳ ಪುನರ್‌ಅನುಭವ ಹಾಗೂ ಉದ್ಯಮ–ಶೈಕ್ಷಣಿಕ ಸಹಕಾರ ವೃದ್ಧಿ ಪಡಿಸುವ ಉದ್ದೇಶದಿಂದ ಈ ಜಾಗತಿಕ ಸಮಾವೇಶವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರು ಹಾಗೂ Nitte Deemed to be University ಯ ಚಾನ್ಸಲರ್ ಶ್ರೀ ಎನ್. ವಿನಯ್ ಹೆಗ್ಡೆ ಉದ್ಘಾಟಿಸಲಿದ್ದಾರೆ. NMAMIT ಮತ್ತು Nitte University ಯ ಇತರ ಗಣ್ಯರೂ ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ. ವಿಶ್ವದ ಅನೇಕ ಭಾಗಗಳಿಂದ ಸುಮಾರು 1000 ಹಳೆಯ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಂಸ್ಥೆಗೆ 25 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಹಿರಿಯ ಉಪನ್ಯಾಸಕರು ಹಾಗೂ ನಿವೃತ್ತ ಸಿಬ್ಬಂದಿಗೂ ವಿಶೇಷ ಆಹ್ವಾನ ನೀಡಲಾಗಿದೆ ಎಂದು ಮುಲ್ಕಿ ಜೀವನ್ ಕೆ. ಶೆಟ್ಟಿ ಹೇಳಿದರು.
ನೋಂದಣಿ: www.nittenexus2025.com
ಪ್ರೆಸ್ ಮೀಟ್‌ನಲ್ಲಿ WENAMITAA ಅಧ್ಯಕ್ಷರು ಮುಲ್ಕಿ ಜೀವನ್ ಕೆ. ಶೆಟ್ಟಿ, ಉಪಾಧ್ಯಕ್ಷರು ಅವಿನಾಶ ಕೃಷ್ಣ ಕುಮಾರ್, ‘Nitte Nexus 2025’ ಕನ್ವೀನರ್ ಸಂದೀಪ್ ರಾವ್ ಇಡ್ಯ, ಸಹ-ಕನ್ವೀನರ್‌ಗಳು ಮಹೇಶ್ ಕಾಮತ್ ಮತ್ತು ಮೇಘನಾ ಶೆಟ್ಟಿ ಉಪಸ್ಥಿತರಿದ್ದರು.