“ಪಿಲಿಪಂಜ” ಸಿನಿಮಾದ ಫ್ರೆಂಡ್ಶಿಪ್ ಸಾಂಗ್ ಬಿಡುಗಡೆ

ಮಂಗಳೂರು: ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿಯಲ್ಲಿ ತಯಾರಾದ ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ, ವಿಭಿನ್ನ. ತಂತ್ರಜ್ಞಾನದ ಬಹುತಾರಾಗಣದ “ಪಿಲಿಪಂಜ” ತುಳು ಸಿನಿಮಾದ ಎರಡನೇ ಹಾಡು ಫ್ರೆಂಡ್ಶಿಪ್ ಸಾಂಗ್ ಭಾರತ್ ಮಾಲ್ ಮಂಗಳೂರಲ್ಲಿ ಬಿಡುಗಡೆಗೊಂಡಿತು.

ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಯೋಗೀಶ್ ಶೆಟ್ಟಿ ಜಪ್ಪು, ಚಿತ್ರ ನಿರ್ದೆಶಕ ರಝಾಕ್ ಪುತ್ತೂರು, ಮಹಾನಗರಪಾಲಿಕೆಯ ಮಾಜಿ ಸದಸ್ಯ ದೀಪಕ್ ಪೂಜಾರಿ, ಮೀನ ಮಂಗಳ, ಕ್ಯಾಮ್ಕೋ ಮಾಜಿ ಅಧ್ಕಕ್ಷ ಪ್ರಮೋದ್ ರೈ, ಪ್ರೇಮ್ ಶೆಟ್ಟಿ, ನಿರ್ಮಾಪಕ ಪ್ರತೀಕ್ ಯು ಪೂಜಾರಿ, ಸಹನಿರ್ಮಾಪಕಿ ಬಿಂದಿಯ ಪ್ರತೀಕ್, ನಿರ್ದೇಶಕ ಭರತ್ ಶೆಟ್ಟಿ, ಎಕ್ಷಿಕ್ಯುಟಿವ್ ಪ್ರೊಡ್ಯುಸರ್ ರಮೇಶ್ ರೈ ಕುಕ್ಕುವಳ್ಳಿ, ಸಂಗೀತ ನಿರ್ದೇಶಕ ಎಲ್ ವಿ ಯಸ್, ಗಾಯಕ ನಟ ರಕ್ಷಣ್ ಮಾಡೂರು, ಗಾಯಕ ಸಂದೇಶ್ ನೀರ್ ಮಾರ್ಗ, ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು, ನಟಿ ದಿಶಾ ರಾಣಿ, ಸಹನಿರ್ದೇಶಕ ಅಕ್ಷತ್ ವಿಟ್ಲ ಹಾಗೂ ಸುರೇಶ್ ಬಲ್ಮಠ ಮುಂತಾದವರು ಉಪಸ್ಥಿತರಿದ್ದರು.

ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರವಿ ರಾಮಕುಂಜ, ರೂಪಶ್ರೀ ವರ್ಕಾಡಿ, ರಂಜನ್ ಬೋಳೂರು, ರಾಜ್ ಪ್ರಕಾಶ್ ಶೆಟ್ಡಿ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ಜಯಶೀಲ, ಭಾಸ್ಕರ್ ಮಣಿಪಾಲ ಅಭಿನಯಿಸಿದ್ದಾರೆ. ಛಾಯಾಗ್ರಹಣ ಉದಯ್ ಬಳ್ಳಾಲ್, ಸಂಗೀತ, ಎಲ್ ವಿ ಯಸ್, ಸಂಕಲನ ಶ್ರೀನಾಥ್ ಪವಾರ್. ಸಿನಿಮಾ ಡಿಸೆಂಬರ್ 12ರಂದು ಜಿಲ್ಲೆಯಾದ್ಯಂತ ಬಿಡಯಗಡೆಯಾಗಲಿದೆ.

 

ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!