ಡಾ. ಹೆಗ್ಗಡೆ ಜನ್ಮದಿನ ಪ್ರಯುಕ್ತ ಚೇಳೈರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ, ಹಿಂದುಳಿದ ಕುಟುಂಬಗಳಿಗೆ ಅಕ್ಕಿ ವಿತರಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬಜಪೆ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ 78 ನೇ ವರ್ಷದ ಜನ್ಮದಿನದ ಪ್ರಯುಕ್ತ ಮುಲ್ಕಿ ವಲಯದ ಪ್ರಯುಕ್ತ ಚೇಳೈರು ಮತ್ತು ಮಧ್ಯ ಕಾರ್ಯಕ್ಷೇತ್ರ ವ್ಯಾಪ್ತಿಯ ಮಧ್ಯ ಪರಿಶಿಷ್ಟ ಪಂಗಡ ಕಾಲನಿಯ ವಾಲ್ಮೀಕಿ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು ಹಾಗೂ ಆರ್ಥಿಕವಾಗಿ ಹಿಂದುಳಿದ ಚೇಳೈರು ಮಧ್ಯದ 11 ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡಲಾಯಿತು.

ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಲ್ಕಿ ವಲಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಚೇಳೈರು ಒಕ್ಕೂಟದ ಉಪಾಧ್ಯಕ್ಷ ಕಿರಣ್ ಶೆಟ್ಟಿ ಕೆರೆಮನೆ, ಸೇವಾ ಪ್ರತಿನಿಧಿಗಳಾದ ಯಶೋದ ಬಿ, ವಿದ್ಯಾ,ವಾಲ್ಮೀಕಿ ವಸತಿ ಶಾಲೆಯ ವಾರ್ಡನ್ ಲಿಂಗರಾಜು ಮುಖ್ಯ ಶಿಕ್ಷಕಿ ಸುನಂದಾ, ಚಿತ್ರಾ ಚೇಳೈರು, ವಾಣಿ ಮಧ್ಯ ಸುಧಾಕರ ಶೆಟ್ಟಿ ಖಂಡಿಗೆ ಮುಂತಾದವರು ಉಪಸ್ಥಿತರಿದ್ದರು.

error: Content is protected !!