ಬಂಟ್ವಾಳ : ಪಿಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆ ಬಿ. ಸಿ ರೋಡ್ ಇಲ್ಲಿಗೆ ಕನ್ನಡ ಮಿತ್ರರು ದುಬೈ ಇವರಿಂದ ಶಾಲೆಗೆ ಲ್ಯಾಪ್ ಟ್ಯಾಪ್, ಪ್ರೊಜೆಕ್ಟರ್ ಹಾಗೂ ಯುಪಿಎಸ್ ನ್ನು ಕೊಡುಗೆ ಯಾಗಿ ನೀಡಿದರು.



ಕನ್ನಡ ಮಿತ್ರರು ದುಬೈ ಮತ್ತು ಕನ್ನಡ ಪಾಠ ಶಾಲೆ ದುಬೈ ಸಂಘಟನೆಯ ಶ್ರೀ ನಾಗರಾಜ್ ಅವರಿಗೆ ಹಾಗೂ ಸಂಘಟನೆಯ ಸೇವೆಗೆ ಕೊಡಂಗೆ ಶಾಲೆಯ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯ ಪರವಾಗಿ, ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಅಧ್ಯಾಪಕರು ಧನ್ಯವಾದಗೈದರು.
