ಯಕ್ಷಗಾನದ ಒಳಗೆ ಸಲಿಂಗ ಕಾಮ: ಬಿಳಿಮಲೆ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು

ಉಡುಪಿ: ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಯಕ್ಷಗಾನದ ಒಳಗೆ ಸಲಿಂಗ ಕಾಮ ಬೆಳೆಯುತ್ತದೆ, ಸ್ತ್ರೀವೇಶ ಕಲಾವಿದರು ಅದನ್ನ ನಿರಾಕರಿಸಲಾರರು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಯಿಂದ ಪುರುಷೋತ್ತಮ್​ ಬಿಳಿಮನೆ ಅವರು ಯಕ್ಷಗಾನ ಕಲಾವಿದರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆನ್ನಲ್ಲೇ ಪುರುಷೋತ್ತಮ್​ ಬಿಳಿಮನೆ ಹೇಳಿಕೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪೇಜಾವರ ಶ್ರೀಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್​ ಬಿಳಿಮನೆ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಯಕ್ಷಗಾನ ಕಲಾವಿದರು ಮಹಾನ್ ಕಲಾತಪಸ್ವಿಗಳು, ಯಕ್ಷಗಾನವನ್ನು ಮೆಚ್ಚುವ ಎಲ್ಲರಿಗೂ ಇದೆ ಅಭಿಪ್ರಾಯವಿದೆ ಎಂದು ಹೇಳಿದರು.

ಪೇಜಾವರ ಶ್ರೀಗಳು

‘ಆಕಾಶವನ್ನು ನೋಡಿ ಉಗುಳಿದ ಹಾಗಾಗಿದೆ’
ಇತ್ತೀಚೆಗೆ ಸಮಾಜದಲ್ಲಿ ಹಿರಿಯರು, ಸಾಹಿತಿಗಳು ಅನಿಸಿಕೊಂಡವರೊಬ್ಬರು ಕಲಾ ತಪಸ್ವಿಗಳ ಬಗ್ಗೆ ಕೀಳು ಅಭಿರುಚಿಯ ಮಾತನಾಡಿದ್ದಾರೆ. ಅವರ ಮಾತಿನಿಂದ ಯಾವುದೇ ಕಲಾರಸಿಕರು ಕಿಂಚಿತ್ತು ವಿಚಲಿತರಾಗಲಿಲ್ಲ, ಯಾವ ಕಲಾವಿದರು ಕೂಡ ಈ ಹೇಳಿಕೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಆಕಾಶವನ್ನು ನೋಡಿ ಉಗುಳಿದ ಹಾಗಾಗಿದೆ. ನಿಮ್ಮ ಸಾಧನೆ ಗುಣಗಳನ್ನು ನೋಡಿ ಸಮಾಜ ನಿಮ್ಮನ್ನು ಗೌರವಿಸುತ್ತದೆ. ಕಲಾವಿದರಾದ ನಿಮ್ಮ ಕಾಲು ಮುಟ್ಟಿ ನಮಸ್ಕರಿಸಬೇಕು ಅಂತಹ ಯೋಗ್ಯತೆ ಇರುವವರು ನೀವು, ಸಮಾಜ ನಿಮ್ಮನ್ನು ಹಾಡಿ ಹೊಗಳುತ್ತಿದೆ ಎಂದು ಪೇಜಾವರ ಶ್ರೀಗಳು ಯಕ್ಷಗಾನ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಬಿಳಿಮಲೆ ಅವರ ಹೇಳಿಕೆಯನ್ನ ಕೆಲವರು ಖಂಡಿಸಿದ್ದರು. ಯಕ್ಷಗಾನ ಕಲಾವಿದರು ಬಿಳಿಮನೆ ವಿರುದ್ಧ ಕೆರಳಿ ಕೆಂಡವಾಗಿದ್ದರು. ಯಕ್ಷಗಾನವನ್ನೇ ಜೀವಾಳದಂತೆ ಕಂಡ ಅನೇಕ ಕಲಾವಿದರು ವೇಷಕಲೆಯ ತರಬೇತಿ, ತಪಸ್ಸು, ಹಾಗೂ ಕಠಿಣ ನಿಯಮ ಪಾಲಿಸುತ್ತಿರುವುದಾಗಿ ಹೇಳಿ, ಈ ರೀತಿಯ ಹೇಳಿಕೆಗಳು ಕಲೆಯ ಸುಧಾರಿತ ಪರಂಪರೆ ಮತ್ತು ಶಿಸ್ತುಗಳನ್ನೆ ವಿರೂಪಗೊಳಿಸುವಂತೆ ಮಾಡಿವೆ ಎಂದು ಆಕ್ಷೇಪಿಸಿದ್ದರು.

error: Content is protected !!