ಬಂಟ್ವಾಳ: ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ಖಾಸಗಿ ಕ್ವಾರಿಯಿಂದ ನಡೆಯುತ್ತಿರುವ ದಿನನಿತ್ಯದ ಜಿಲೆಟಿನ್ ಸ್ಫೋಟಗಳು ಗ್ರಾಮಸ್ಥರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿವೆ. ಸ್ಫೋಟದ ಭಾರೀ ಆಘಾತ, ಕಲ್ಲುಗಳ ಉದುರು, ಗಾಳಿ–ಮಣ್ಣು ಮಾಲಿನ್ಯ, ಮನೆ–ಅಂಗನವಾಡಿಗಳ ಬಿರುಕುಗಳು ಎಂಬ ಸಮಸ್ಯೆಗಳು ತೀವ್ರಗೊಂಡಿದ್ದು, ಪರಿಸರ ಮತ್ತು ಮಾನವ ಜೀವಕ್ಕೆ ಅಪಾಯ ಹೆಚ್ಚುತ್ತಿದೆ.

ಸ್ಫೋಟದ ಪರಿಣಾಮವಾಗಿ ಮನೆಗಳು ನಡುಗಿ ಗೋಡೆಗಳಿಗೆ ಬಿರುಕು ಬಿದ್ದಿವೆ. ಜಾನುವಾರು ಕೊಠಡಿಗಳಿಂದ ಶೀಟ್‌ಗಳು ಕಿತ್ತುಬಿದ್ದಿವೆ. ಜಲ್ಲಿ ಧೂಳು ಗಾಳಿಯಿಂದ ಮನೆಗಳಿಗೆ ನುಗ್ಗುತ್ತಿದೆ. ಜಾನುವಾರುಗಳು ಹೆದರಿ ಓಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಮನೆಯನ್ನು ಕಟ್ಟುತ್ತಿದ್ದೊಂದು ಕುಟುಂಬ ನಿರ್ಮಾಣ ಕಾರ್ಯವೇ ನಿಲ್ಲಿಸಬೇಕಾಗಿದೆ.

ಕ್ವಾರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಮಾರ್ಗದಲ್ಲಿ ನಾಲ್ಕು ಶಾಲಾ ಬಸ್ಸುಗಳು ಸಂಚರಿಸುತ್ತಿದ್ದು, ಅರ್ಧ ಕಿಲೋಮೀಟರ್ ಅಂತರದಲ್ಲಿರುವ ಅಂಗನವಾಡಿಯಲ್ಲಿ ಸುಮಾರು 20 ಮಕ್ಕಳು ದಿನವಿಡೀ ಇದ್ದಾರೆ. ಸ್ಫೋಟದ ಕಂಪನದಿಂದ ಅಂಗನವಾಡಿ ಕಟ್ಟಡಕ್ಕೂ ಬಿರುಕುಬಿದ್ದಿದ್ದು, ಪೋಷಕರ ಆತಂಕ ಹೆಚ್ಚಿಸಿದೆ.

ಮಳೆಯ ಸಂದರ್ಭ ಪ್ರದೇಶದಲ್ಲಿ ಭೂಕುಸಿತಗಳು ವರದಿಯಾಗಿದ್ದು, ಮನೆಗಳಿಗೆ ಹಾನಿಯಾಗಿದೆ. ಮಂಜನಾಡಿಯ ದುರ್ಘಟನೆ ಮರುಕಳಿಸುವ ಭೀತಿ ಗ್ರಾಮಸ್ಥರಲ್ಲಿ ಮೂಡಿದೆ.

“ಅಧಿಕಾರಿಗಳು ಕೆಲವರ ಒತ್ತಡಕ್ಕೆ ಮಣಿದು ಹೈಕೋರ್ಟ್ ಆದೇಶವನ್ನೇ ಉಲ್ಲಂಘಿಸುತ್ತಿದ್ದಾರೆ. ಮುಂದೂಡಿಕೆ ಮುಂದುವರಿದರೆ ಕ್ವಾರಿಯಲ್ಲೇ ಕುಳಿತು ಪ್ರತಿಭಟನೆ ನಡೆಸಲು ಮುಂದಾಗುತ್ತೇವೆ” ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ತಕ್ಷಣದ ಕ್ರಮ ಜರುಗಿ ಪರಿಸರ–ಜೀವಸಂಕುಲಕ್ಕೆ ಅಪಾಯ ಉಂಟುಮಾಡುತ್ತಿರುವ ಕ್ವಾರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.