ಬಹುಭಾಷಾ ನಟಿ ವೇದಿಕಾ ತಮ್ಮ ಇತ್ತೀಚಿನ ಗ್ಲಾಮರ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದ್ದಾರೆ. ಮೂಲತಃ ಕನ್ನಡದವರಾದರೂ, ಮುಂಬೈನಲ್ಲಿ ಬೆಳೆದ ವೇದಿಕಾ ಮಾಡೆಲ್-ಕಮ್ ನಟಿಯಾಗಿ ಗ್ಲಾಮರ್ ಅವತಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.



ಸಮುದ್ರ ತೀರದಲ್ಲಿ ಬ್ಲ್ಯಾಕ್ ಬಿಕಿನಿಯಲ್ಲಿ ವಿವಿಧ ಪೋಸ್‌ಗಳಲ್ಲಿ ತೆಗೆಸಿಕೊಂಡ ವಿಡಿಯೋವನ್ನು ವೇದಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಡಿಯೋಗೆ ಸಾವಿರಾರು ಲೈಕ್ಸ್‌ಗಳು ಹಾಗೂ ಕಮೆಂಟ್ಸ್‌ಗಳು ಹರಿದುಬರುತ್ತಿವೆ.

ತಮಿಳು ಚಿತ್ರರಂಗದಿಂದ ನಟನಾ ಪ್ರವೇಶ ಪಡೆದ ವೇದಿಕಾ, ನಂತರ ತೆಲುಗು ಹಾಗೂ ಕನ್ನಡದ ‘ಶಿವಲಿಂಗ’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ್ದರು.
