ಹಿರಿಯ ನಟ ಧರ್ಮೇಂದ್ರ  ಇನ್ನಿಲ್ಲ

ಮುಂಬೈ: ಹಿರಿಯ ಚಲನಚಿತ್ರ ನಟ ಧರ್ಮೇಂದ್ರ ಸೋಮವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಮುಂಬೈನ ನಿವಾಸದಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಡಿಸೆಂಬರ್‌ 8ರಂದು ಆಚರಿಸಲಿದ್ದ 90ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಅವರ ನಿಧನ ಸಂಭವಿಸಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಅಕ್ಟೋಬರ್‌ 31ರಂದು ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂತ್ಯಕ್ರಿಯೆಯನ್ನು ಪವನ್‌ ಹ್ಯಾನ್ಸ್‌ ಸ್ಮಶಾನದಲ್ಲಿ ನೆರವೇರಿಸಲಾಗುವುದು.

ಶ್ರೀರಾಮ್‌ ರಾಘವನ್ ನಿರ್ದೇಶನದ ಇಕ್ಕಿಸ್ ಧರ್ಮೇಂದ್ರ ಅವರ ಕೊನೆಯ ಚಿತ್ರವಾಗಲಿದ್ದು, ಅಮಿತಾಬ್‌ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ನಟಿಸಿರುವ ಈ ಸಿನಿಮಾ ಡಿಸೆಂಬರ್‌ 25, 2025ರಂದು ಬಿಡುಗಡೆಯಾಗಿದೆ.

error: Content is protected !!