ಎಪ್ಸ್ಟೀನ್ ಕರಾಳ ದ್ವೀಪದಲ್ಲಿ ಬ್ರಹ್ಮಾಂಡದ ವಿಜ್ಞಾನಿ!: ಸ್ಟೀಫನ್ ಹಾಕಿಂಗ್ ಬದುಕಿನ ‘ಅನ್ ಸೆನ್ಸಾರ್ಡ್’ ಫೋಟೋಗಳು ಲೀಕ್!

ವಾಷಿಂಗ್ಟನ್: ಮೋಟಾರ್ ನ್ಯೂರಾನ್ ಎಂಬ ಮಾರಕ ಕಾಯಿಲೆಯಿಂದ ದೇಹವೆಲ್ಲಾ ಜರ್ಜರಿತವಾಗಿದ್ದರೂ, ತನ್ನ ಬುದ್ಧಿಶಕ್ತಿಯಿಂದ ಇಡೀ ಬ್ರಹ್ಮಾಂಡದ ರಹಸ್ಯವನ್ನೇ ಬಿಡಿಸಿದ್ದ ಸ್ಟೀಫನ್ ಹಾಕಿಂಗ್ ಇಂದು ಒಂದು ಅಸಹ್ಯಕರ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕುಖ್ಯಾತ ಕಾಮುಕ ಜೆಫ್ರಿ ಎಪ್ಸ್ಟೀನ್‌ನ ಖಾಸಗಿ ದ್ವೀಪದಲ್ಲಿ ಹಾಕಿಂಗ್ ಇಬ್ಬರು ಬಿಕಿನಿ ಧರಿಸಿದ ಸುಂದರಿಯರ ಜೊತೆ ಪಾನೀಯ ಹಿಡಿದು ಕುಳಿತಿರುವ ಫೋಟೋಗಳು ಈಗ ದೆಹಲಿಯಿಂದ ವಾಷಿಂಗ್ಟನ್‌ವರೆಗೆ ಸಂಚಲನ ಮೂಡಿಸಿವೆ.

Stephen Hawking Seen Sipping Drinks With Women In Bikinis In Epstein Files

ಆ ಕರಾಳ ದ್ವೀಪದಲ್ಲಿ ಮಾಡಿದ್ದೇನು?:
ಕಳೆದ 2006ರಲ್ಲಿ ಕೆರಿಬಿಯನ್ ದ್ವೀಪದಲ್ಲಿ ಎಪ್ಸ್ಟೀನ್ ಒಂದು ಹೈಟೆಕ್ ವಿಜ್ಞಾನ ಸಮ್ಮೇಳನ ಆಯೋಜಿಸಿದ್ದ. ಕ್ವಾಂಟಮ್ ಕಾಸ್ಮಾಲಜಿ ಬಗ್ಗೆ ಮಾತಾಡೋಕೆ ಹೋದ ಹಾಕಿಂಗ್ ಅಲ್ಲಿನ ಆ ಮಾಯಾಲೋಕದಲ್ಲಿ ಸಿಕ್ಕಿಬಿದ್ದರಾ? ಹತ್ತಾರು ಫೋಟೋಗಳಲ್ಲಿ ಹಾಕಿಂಗ್ ಈ ಬಿಕಿನಿ ಸುಂದರಿಯರ ಮಧ್ಯೆ ನಗುತ್ತಾ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ವರ್ಜೀನಿಯಾ ಗಿಯುಫ್ರೆ ಎಂಬ ಸಂತ್ರಸ್ತೆ ಈ ಹಾಕಿಂಗ್ ಅಪ್ಪಟ ‘ಕಾಮಕ್ರೀಡೆ’ಯಲ್ಲಿ ಭಾಗಿಯಾಗಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದಾಳೆ.

Jeffrey Epstein victim Chauntae Davies says she wishes Ghislaine Maxwell  well in hell | Daily Mail Online

ಕುಟುಂಬದ ಆಕ್ರೋಶದ ನುಡಿಗಳು:
ಆದರೆ, ಹಾಕಿಂಗ್ ಕುಟುಂಬ ಈ ಸುದ್ದಿಯನ್ನು ಕೇಳಿ ರೊಚ್ಚಿಗೆದ್ದಿದೆ. “ಆ ಫೋಟೋದಲ್ಲಿರೋ ಹೆಣ್ಣುಮಕ್ಕಳು ವೇಶ್ಯೆಯರಲ್ಲ, ಅವರು ಹಾಕಿಂಗ್‌ನನ್ನು ನೋಡಿಕೊಳ್ಳುತ್ತಿದ್ದ ನರ್ಸ್‌ಗಳು!” ಎಂದು ಅಬ್ಬರಿಸಿದ್ದಾರೆ. ದೇಹದ ಒಂದು ಅಂಗವೂ ಸರಿಯಾಗಿ ಕೆಲಸ ಮಾಡದ ಹಾಕಿಂಗ್‌ಗೆ ದಿನದ 24 ಗಂಟೆಯೂ ಕೇರ್ ಟೇಕರ್‌ಗಳ ಅಗತ್ಯವಿತ್ತು. “ಅದು ವಿಜ್ಞಾನದ ಗೋಷ್ಠಿಯೆ ಹೊರತು ಬೇರೇನಲ್ಲ, ವಿಜ್ಞಾನಿಯ ಮೇಲೆ ಇಂತಹ ಗಲೀಜು ಆರೋಪ ಮಾಡೋದು ಅನ್ಯಾಯದ ಪರಮಾವಧಿ” ಎಂಬುದು ಕುಟುಂಬದ ವಾದ.

ಎಪ್ಸ್ಟೀನ್‌ನ ಎಕ್ಸ್‌ಕ್ಲೂಸಿವ್ ಮಸಲತ್ತು:
ಇದೇ ಎಪ್ಸ್ಟೀನ್ ಒಂದು ಇಮೇಲ್‌ನಲ್ಲಿ “ಯಾರಾದರೂ ಹಾಕಿಂಗ್ ಮೇಲಿರೋ ಆರೋಪ ಸುಳ್ಳು ಅಂತ ಸಾಬೀತು ಮಾಡಿದರೆ ಅವರಿಗೆ ದೊಡ್ಡ ಇನಾಮು ಕೊಡ್ತೀನಿ” ಅಂತ ಬರೆದಿದ್ದನಂತೆ. ವಿಜ್ಞಾನಿಯ ಗೌರವ ಕಾಪಾಡೋಕೆ ಆತ ಯಾಕೆ ಇಷ್ಟು ತವಕ ಪಟ್ಟಿದ್ದ ಅನ್ನೋದೇ ಈಗ ಅತೀ ದೊಡ್ಡ ಪ್ರಶ್ನೆ! ಕಪ್ಪು ರಂಧ್ರಗಳ ಬಗ್ಗೆ ಅಧ್ಯಯನ ಮಾಡಿದ ಹಾಕಿಂಗ್, ಕೊನೆಗೆ ಎಪ್ಸ್ಟೀನ್ ಎಂಬ ಕರಾಳ ರಂಧ್ರದ ಫೈಲ್‌ಗಳಲ್ಲಿ ಸಿಕ್ಕಿಬಿದ್ದಿದ್ದು ವಿಧಿಯ ಅಣಕವಲ್ಲದೆ ಮತ್ತೇನು?

error: Content is protected !!