ಮಂಗಳೂರಿನಲ್ಲಿ 40 ಗಂಟೆಗಳ ನಿರಂತರ ಗಾಯನ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲು

ಮಂಗಳೂರು: ಪುರಭವನದಲ್ಲಿ “ಗಾತಾ ರಹೇ ಮೇರಾ ದಿಲ್ ” ಎಂಬ ಹೆಸರಿನಲ್ಲಿ ಎರಡು ದಿನಗಳಿಂದ ನಿರಂತರ‌ 40 ಗಂಟೆಗಳ ಕಾಲ ಹಾಡುವ ಮೂಲಕ ತಂಡವೊಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.

ಜೀ ಕನ್ನಡದ ಸರಿಗಮ ಖ್ಯಾತಿಯ ಯಶವಂತ್ ಎಂ.ಜಿ. ಮಾರ್ಗದರ್ಶನದಲ್ಲಿ ಶೋಡಶಿ ಫೌಂಡೇಶನ್ ವತಿಯಿಂದ, ಭಾರತೀಯ ಸಿನೀ ಸಂಗೀತ ಲೋಕದ ಅಮರ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವವಾಗಿ ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಿತು.

ಮಂಗಳವಾರ(ನ.18) ಬೆಳಿಗ್ಗೆ 2.00 ಗಂಟೆಗೆ ಡಿ ವೈ ಎಸ್ ಪಿ ಮಹೇಶ್ ಕುಮಾರ್ ದೀಪ ಬೆಳಗುವ ಮೂಲಕ ಪ್ರಾರಂಭಗೊಂಡ ಈ ಹಾಡುಗಳ ಸರಣಿ, ಬುಧವಾರ(ನ.19) ಸಂಜೆ 6.10 ಗಂಟೆಗೆ ಸಮಾಪ್ತಿಗೊಂಡಿತು. ಮಹಾ ಸಂಗೀತ ಸಂಭ್ರಮದಲ್ಲಿ ನೂರಮೂವತ್ತಕ್ಕೂ ಹೆಚ್ಚು ಹಾಡುಗಾರರು ಪಾಲ್ಗೊಂಡಿದ್ದರು.ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳೊಂದಿಗೆ 40 ಗಂಟೆಗಳ ನಿರಂತರ ಗಾಯನ ಪ್ರದರ್ಶನ ನಡೆಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕದ ಪ್ರಖ್ಯಾತ ಹಾಗೂ ಗೌರವಾನ್ವಿತ ಗಾಯಕರಿಂದ ನಡೆಸಲಾಗಿದ್ದು, ಸಂಗೀತಾಭಿಮಾನಿಗಳಿಗೆ ಸಾಂಸ್ಕೃತಿಕ ಹಬ್ಬದಂತೆಯೇ ಸಂಭ್ರಮ ನೀಡಿತು. ದಾಖಲೆ ಪೂರೈಸಿದ ಶೋಡಶಿ ಫೌಂಡೇಶನ್ ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮನೀಷ್ ಬಿಷ್ಣೋಯ್, ಶಾಸಕ ವೇದವ್ಯಾಸ ಕಾಮತ್ ಪ್ರಮಾಣ ಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ‌ ವೇದವ್ಯಾಸ ಕಾಮತ್ ಈ ರೀತಿಯ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ದೇವಸ್ಥಾನಗಳಲ್ಲಿ ನಿರಂತರ ಭಜನೆ ಕೂಡಾ ನಡೆಯುತ್ತದೆ. ಆದರೆ ಆಧ್ಯಾತ್ಮಿಕ ಕಾರಣಕ್ಕಾಗಿ ಅದನ್ನು ದಾಖಲೆಗೆ ಬಳಸುವುದಿಲ್ಲ. ಇಂತಹ ಸಾಧನೆಗಳು ಮತ್ತಷ್ಟು ನಡೆಯಬೇಕು. ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ, ಯಶ್ವಂತ್ ಎಂ.ಜಿ, ಮನೀಷ್ ವಿಷ್ಣೋಯ್, ಲಂಚುಲಾಲ್, ಮಣಿಕಾಂತ ಕದ್ರಿ, ರಮೇಶ್ ಚಂದ್ರ, ಶ್ರೀಕಾಂತ ಕಾಮತ್, ವೇಣುಗೋಪಾಲ್ ಪುತ್ತೂರು, ರಂಜನ್ ದಾಸ್ , ವಿಶ್ವಾಸ್ ಗುರುಪುರ, ಸತೀಶ್ ಇರಾ, ಡಾ ಶಿವರಾಮ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಡಾ. ಮನೀಷ್ ವಿಷ್ಣೋಯ್, ಡಾ. ಶಿವರಾಮ್ ಕೆ. ಭಂಡಾರಿ,ರಮೇಶ್ ಚಂದ್ರ, ರಮೇಶ್. ಕೆ . ಪಾಟೀಲ್, ಅನಿಲ್ ಶೆಟ್ಟಿ ಸೂರಿಂಜೆ, ಮನೋಹರ್ ಶೆಟ್ಟಿ, ಗೋಪಾಲ ಕೃಷ್ಣ, ಭರತ್ ಕಾಮತ್, ಮಣಿಕಾಂತ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!