ಭಾರತಕ್ಕೆ ಅಮೆರಿಕದಿಂದ $92.8 ಮಿಲಿಯನ್ ಮೌಲ್ಯದ ಕ್ಷಿಪಣಿ–ಸ್ಫೋಟಕಗಳ ಮಾರಾಟಕ್ಕೆ ಹಸಿರು ನಿಶಾನೆ:‌ ಪಾಕಿಸ್ತಾನ, ಚೀನಾ ಕಂಗಾಲು

ನವದೆಹಲಿ: ಅಮೆರಿಕಾ ಸಂಯುಕ್ತ ಸಂಸ್ಥಾನವು ಭಾರತಕ್ಕೆ ಜಾವೆಲಿನ್ ಕ್ಷಿಪಣಿ ವ್ಯವಸ್ಥೆಗಳು, ಎಕ್ಸಾಲಿಬರ್ ಯುದ್ಧತಂತ್ರದ ಸ್ಪೋಟಕಗಳು ಮತ್ತು ಸಂಬಂಧಿತ ರಕ್ಷಣಾ ಉಪಕರಣಗಳ ಮಾರಾಟಕ್ಕೆ ಹಸಿರು ನಿಶಾನೆ ತೋರಿಸಿದೆ. ಒಟ್ಟು $92.8 ಮಿಲಿಯನ್ ಮೌಲ್ಯದ ಈ ಮಾರಾಟಕ್ಕೆ ಅಗತ್ಯ ಅನುಮತಿಗಳು ದೊರೆತಿದೆ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (DSCA) ಬುಧವಾರ ಪ್ರಕಟಿಸಿದೆ. ಇದರಿಂದ ಪಾಕಿಸ್ತಾನ ಹಾಗೂ ಚೀನಾ ಕಂಗಾಲಾಗಿದೆ.

US Clears $93-mn Sale Of Javelin Missiles, Excalibur Projectiles To India, To Help 'Deter Regional Threats' | Asianet Newsable

DSCA ಪ್ರಕಾರ, ಈ ಒಪ್ಪಂದವು ಅಮೆರಿಕಾ–ಭಾರತ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದಲ್ಲದೆ, ಯುನೈಟೆಡ್ ಸ್ಟೇಟ್ಸ್‌ನ ವಿದೇಶಾಂಗ ಮತ್ತು ರಾಷ್ಟ್ರೀಯ ಭದ್ರತಾ ಗುರಿಗಳನ್ನು ಸಾಧಿಸಲು ಸಹಕಾರಿಯಾಗಲಿದೆ.

ಮಾರಾಟ ಪ್ಯಾಕೇಜ್‌ನಲ್ಲಿ ಏನು ಇದೆ?
ಮೊದಲ ಪ್ಯಾಕೇಜ್, ಮೌಲ್ಯ $45.7 ಮಿಲಿಯನ್ ಮೊತ್ತದ ಯುದ್ಧ ಸಾಮಗ್ರಿಗಳಿವೆ
-ಜಾವೆಲಿನ್ FGM-148 “ಫ್ಲೈ-ಟು-ಬೈ” ಕ್ಷಿಪಣಿಗಳು
-25 ಜಾವೆಲಿನ್ ಲೈಟ್‌ವೈಟ್ ಕಮಾಂಡ್ ಲಾಂಚ್ ಯೂನಿಟ್‌ಗಳು (LwCLU) ಅಥವಾ ಬ್ಲಾಕ್-1 CLU
-ತರಬೇತಿಗಾಗಿ ಬಳಸುವ ಸಿಮ್ಯುಲೇಶನ್ ಉಪಕರಣಗಳು
-ಬ್ಯಾಟರಿ ಕೂಲಂಟ್ ಯೂನಿಟ್‌ಗಳು
-ಆಪರೇಟರ್ ಮತ್ತು ತಾಂತ್ರಿಕ ಕೈಪಿಡಿಗಳು
-ಬಿಡಿಭಾಗಗಳು, ಜೀವನಚಕ್ರ ಬೆಂಬಲ, ತಾಂತ್ರಿಕ ನೆರವು ಮತ್ತು CLU ನವೀಕರಣ ಸೇವೆಗಳು

ಎರಡನೇ ಪ್ಯಾಕೇಜ್ ಅಡಿ, ಭಾರತವು 216 M982A1 ಎಕ್ಸಾಲಿಬರ್ ಸ್ಪೋಟಕಗಳನ್ನು ಖರೀದಿಸುತ್ತಿದೆ. ಜೊತೆಗೆ: ಫೈರ್ ಕಂಟ್ರೋಲ್ ಸಿಸ್ಟಂಗಳು,,ಪ್ರೈಮರ್‌ಗಳು, ಪ್ರೊಪೆಲ್ಲಂಟ್, ತಾಂತ್ರಿಕ ದತ್ತಾಂಶ, ದುರಸ್ತಿ ಸೇವೆಗಳು, ಲಾಜಿಸ್ಟಿಕ್ಸ್ ಸೇರಿವೆ.

US Approves $93 Million Defence Deal To Sell Excalibur Projectiles, Javelin Missiles To India

ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಉತ್ತೇಜನ
DSCA ಹೇಳುವಂತೆ, ಈ ಮಾರಾಟವು ಭಾರತದ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ. ಈಗಿನ ಮತ್ತು ಭವಿಷ್ಯದ ಬೆದರಿಕೆಗಳನ್ನು ಎದುರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. “ಭಾರತ ತನ್ನ ಸಶಸ್ತ್ರ ಪಡೆಗಳಿಗೆ ಈ ಉಪಕರಣಗಳನ್ನು ಸುಗಮವಾಗಿ ಸೇರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಮಾರಾಟವು ಪ್ರದೇಶದ ಮಿಲಿಟರಿ ಸಮತೋಲನವನ್ನು ಬದಲಿಸುವುದಿಲ್ಲ ಹಾಗೂ ಅಮೆರಿಕದ ಸಂಬಂಧದ ಮೇಲೂ ಯಾವುದೇ ಹಾನಿ ಬೀರುವುದಿಲ್ಲ” ಎಂದು DSCA ಸ್ಪಷ್ಟಪಡಿಸಿದೆ.

ಇಂಡೋ–ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ, ಸ್ಥಿರತೆ ಮತ್ತು ಆರ್ಥಿಕ ಅಭಿವೃದ್ಧಿಗೆ ಭಾರತ ಪ್ರಮುಖ ಶಕ್ತಿ ಎಂದು ಅಮೆರಿಕಾ ಮತತೊಮ್ಮೆ ಉದ್ಘೋಷಿಸಿದೆ. ಹೊಸ ನಿರ್ಧಾರದ ಬಗ್ಗೆ ಮಾತನಾಡಿದ ಅಮೆರಿಕಾ ಶಾಸಕರು, “ಭಾರತದೊಂದಿಗೆ ನಮ್ಮ ಸಂಬಂಧ ಪಾಕಿಸ್ತಾನದೊಂದಿಗೆ ಇರುವುದಕ್ಕಿಂತ ವಿಭಿನ್ನ ಮತ್ತು ಆಳವಾದದು” ಎಂದು ಹೇಳಿದ್ದಾರೆ.

error: Content is protected !!