ಮಂಗಳೂರು: ಶ್ರೀಮತಿ ವಿಜೇತಾ ದಂಡೆಕೇರಿ ಅವರು “ಎ ಫ್ರೇಮ್ವರ್ಕ್ ಫಾರ್ ಅ್ಯಂಟಿಸಿಪೇಟರಿ ಡೆಸಿಷನ್ ಮೇಕಿಂಗ್ ಬೇಸ್ಡ್ ಎಫಿಷಿಯಂಟ್ ನ್ಯಾವಿಗೇಶನ್ ಸಿಸ್ಟಮ್ ಫಾರ್ ದ ವಿಶನ್ ಇಂಪೇಯರ್ಡ್” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂದಕ್ಕಾಗಿ ಸುರತ್ಕಲ್‌ನ ಪ್ರತಿಷ್ಠಿತ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕವು ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ.

ಶ್ರೀಮತಿ ವಿಜೇತಾ ದಂಡೆಕೇರಿ ಸಚಿನ್ ದಂಡೆಕೇರಿಯವರ ಪತ್ನಿ ಹಾಗೂ ಡಾ. ಸಂಜೀವ ದಂಡೆಕೇರಿ ಮತ್ತು ಜಲಜಾಕ್ಷಿ ದಂಡಕೇರಿ ಯವರ ಸೊಸೆ ಮತ್ತು ಉಮೇಶ್. ಕೆ ಮತ್ತು ಮೀರಾ ಉಮೇಶ್ ದಂಪತಿಗಳ ಪುತ್ರಿ.

ಇವರು ಇನ್ಫರ್ಮೇಶನ್ ಸೈಂನ್ಸ್ ನಲ್ಲಿ ಬಿಇ ಮಾಡಿ ನಿಟ್ಟೆ ಇನ್ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ಸೈಂನ್ಸ್ ನಲ್ಲಿ ಎಂಟೆಕ್ ಮುಗಿಸಿದ್ದು, ಮಂಗಳೂರಿನ ಸೆಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.