ನ.16ರಂದು ‘ಮೂಲತ್ವ ವಿಶ್ವ ಪ್ರಶಸ್ತಿ – 2025’: ಈ ಬಾರಿ ಗೌರವ ನೆಲೆ ಫೌಂಡೇಶನ್‌ಗೆ

ಮಂಗಳೂರು: “ನಾನೇ ನೀನು, ನೀನೇ ನಾನು” ಎಂಬ ತತ್ವದಡಿ 20 ವರ್ಷಗಳಿಂದ ಸಾಮಾಜಿಕ ಮತ್ತು ಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್, ನಿಸ್ವಾರ್ಥ ಸೇವೆಗೈದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುವ ‘ಮೂಲತ್ವ ವಿಶ್ವ ಪ್ರಶಸ್ತಿ’ಯ 10ನೇ ಆವೃತ್ತಿಯನ್ನು ಈ ವರ್ಷ ಆಚರಿಸುತ್ತಿದೆ. 2025ರ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಅವಕಾಶವಂಚಿತ ಮಕ್ಕಳ ಹಾಗೂ ಸಮುದಾಯಗಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಬೆಂಗಳೂರು ಆಧಾರಿತ ‘ನೆಲೆ ಫೌಂಡೇಶನ್’ಗೆ ಪ್ರದಾನ ಮಾಡಲು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯೊಂದಿಗೆ ₹1,00,001 ನಗದು ಮತ್ತು ಫಲಕ ನೀಡಲಾಗುತ್ತದೆ ಎಂದು ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್ ತಿಳಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮ ನವೆಂಬರ್ 16, 2025 (ಭಾನುವಾರ) ಬೆಳಿಗ್ಗೆ 10.00 ಗಂಟೆಗೆ ಶಾರದಾ ವಿದ್ಯಾಲಯ, ಕೊಡಿಯಲ್ ಬೈಲ್, ಮಂಗಳೂರಲ್ಲಿ ನಡೆಯಲಿದೆ. *ಮುಖ್ಯ ಅತಿಥಿಗಳಾಗಿ ಡಾ. ವಾಮನ್ ಶೆಣೈ – ದಕ್ಷಿಣ ಮಧ್ಯ ಕ್ಷೇತ್ರ ಮಾನ್ಯ ಸಂಘ ಚಾಲಕ, ಡಾ. ಜಿ. ಶಂಕರ್ – ನಾಡೋಜ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ, ಶ್ರೀ ಸೂರ್ಯಕಾಂತ್ ಜಯ ಸುರ್ವಣ – ಕಾರ್ಯಾಧ್ಯಕ್ಷ, ಭಾರತ್ ಕೋ-ಆಪರೇಟಿವ್ ಬ್ಯಾಂಕ್, ಡಾ. ಎಂ.ಬಿ. ಪುರಾಣಿಕ್ – ಅಧ್ಯಕ್ಷ, ಶಾರದಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಮಂಗಳೂರು, ರವಿ ರೈ ಕಳಸ – ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲ್ಪನಾ ಕೋಟ್ಯಾನ್, ಶೈನಿ ಮೂಲತ್ವ, ಅಕ್ಷತಾ ಕದ್ರಿ (ಟ್ರಸ್ಟಿಗಳು), ಡಿ.ಎಂ. ಜಯಕುಮಾರ್ (ಸಂಚಾಲಕ, ಮೂಲತ್ವ ವಿಶ್ವ ಪ್ರಶಸ್ತಿ–2025) ಮತ್ತು ಸುನೀಲ್ ಆಚಾರ್ (ಆಯ್ಕೆ ಸಮಿತಿ ಸದಸ್ಯ) ಉಪಸ್ಥಿತರಿದ್ದರು.

error: Content is protected !!