ನವದೆಹಲಿ: ಭೂತಾನ್ ನಾಲ್ಕನೇ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ನ.11) ಭೂತಾನ್ ಗೆ ತೆರಳಿದರು.

ಎರಡು ದಿನಗಳ ಈ ಪ್ರವಾಸದಲ್ಲಿ ಪ್ರಧಾನಿ ಮೋದಿ, ಭೂತಾನ್ ದೊರೆ ಜುಗ್ಮೆ ಕೇಶರ್ ನಂಗ್ಯಾಲ್ ವಾಂಗ್‌ಚುಕ್, ಅವರ ತಂದೆಯೂ ಆಗಿರುವ ಪೂರ್ವಾಧಿಕಾರಿ ಸಿಂಗ್ಯೆ ಹಾಗೂ ಪ್ರಧಾನ ಮಂತ್ರಿ ಶೇರಿಂಗ್ ತೋಬ್ಗೆ ಅವರನ್ನು ಭೇಟಿಯಾಗಲಿದ್ದಾರೆ.

‘ನನ್ನ ಈ ಭೇಟಿ ಸ್ನೇಹ ಸಂಬಂಧ ಬಲಗೊಳ್ಳಲಿದೆ ಮತ್ತು ಪ್ರಗತಿ ಹಾಗೂ ಅಭ್ಯುದಯದಲ್ಲಿ ನಮ್ಮ ಜಂಟಿ ಪ್ರಯತ್ನ ಇನ್ನಷ್ಟು ಗಟ್ಟಿಯಾಗಲಿದೆ ಎಂದು ನಾನು ನಂಬಿದ್ದೇನೆ’ ಎಂದು ಪ್ರಧಾನಿ ಪ್ರಯಾಣಕ್ಕೂ ಮುನ್ನ ಹೇಳಿದ್ದಾರೆ. ‘ನಾಲ್ಕನೇ ದೊರೆಯ 70ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಜನರೊಂದಿಗೆ ಪಾಲ್ಗೊಳ್ಳುವುದು ಗೌರವದ ವಿಷಯ’ ಎಂದು ಅವರು ಹೇಳಿದ್ದಾರೆ.

ಹಾಗೆಯೇ ಈ ವೇಳೆ ಪುನತಾಂಗ್ಚು – II ಜಲವಿದ್ಯುತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.