ಸುರತ್ಕಲ್: ಬಾಂಗ್ಲಾದೇಶದಲ್ಲಿ ನ.13 ರಂದು ನಡೆಯಲಿರುವ 12 ರಾಷ್ಟ್ರಗಳ ಮಹಿಳಾ ವಿಶ್ವಕಪ್ ಕಬಡ್ಡಿಯಲ್ಲಿ ಭಾರತೀಯ ತಂಡಕ್ಕೆ ಸುರತ್ಕಲ್ ಇಡ್ಯಾ ನಿವಾಸಿ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿ ಧನಲಕ್ಷ್ಮೀ ಪೂಜಾರಿ ಆಯ್ಕೆಯಾಗಿದ್ದಾರೆ.

ಧನಲಕ್ಷ್ಮೀಯವರಿಗೆ ಕಬಡ್ಡಿ ಕ್ರೀಡೆಯಲ್ಲಿ ಇರುವ ಸಾಮರ್ಥ್ಯವನ್ನು ಪರಿಗಣಿಸಿ ಡಾ| ಎಂ. ಮೋಹನ್ ಆಳ್ವ ಅವರು ತಮ್ಮ ಸಂಸ್ಥೆಯಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟು ಪ್ರೋತ್ಸಾಹವನ್ನು ನೀಡಿ ಹುರಿದುಂಬಿಸಿದ್ದು, ಇದೀಗ ಧನಲಕ್ಷ್ಮೀ ಅವರು ರಾಜ್ಯ ಕಬಡ್ಡಿ ತಂಡವನ್ನು 2025 ಸೀನಿಯರ್‌ಲೆವೆಲ್ ಫೆಡರೇಶನ್ ಸ್ಪರ್ಧೆಯಲ್ಲಿ ನಾಯಕಿಯಾಗಿ ಮುನ್ನಡೆಸಿದರು.

ಇದುವರೆಗೆ 12 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಜೂನಿಯರ್, ಸೀನಿಯರ್, ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಕರ್ನಾಟಕದ ಪರವಾಗಿ ಧನಲಕ್ಷ್ಮೀ ಒಬ್ಬರೇ ಆಯ್ಕೆಯಾಗಿದ್ದಾರೆ.