ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಮಧುಮೇಹ ಜಾಗೃತಿ ಅಭಿಯಾನ, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳು, ‘ಎಕ್ಸ್‌ಪ್ಲೋರಾ 2025’

ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಫಾದರ್‌ ಮುಲ್ಲರ್‌ ಆಸ್ಪತ್ರೆಯ ವೈದ್ಯಕೀಯ ವಿಭಾಗದಿಂದ ವಿಶ್ವ ಮಧುಮೇಹ ದಿನದ ಅಂಗವಾಗಿ ಜಾಗೃತಿ ಅಭಿಯಾನ, ಮಕ್ಕಳ ದಿನಾಚರಣೆಯ ಅಂಗವಾಗಿ ಫಾದರ್ ಮುಲ್ಲರ್ ಸಂಸ್ಥೆಗಳಿಂದ ವಿಶೇಷ ಕಾರ್ಯಕ್ರಮಗಳು, NABH ಮಾನ್ಯತೆ ಪಡೆದ ಹಿನ್ನೆ ವಿಶ್ವ ಗುಣಮಟ್ಟ ವಾರ ಆಚರಣೆ, ‘ಎಕ್ಸ್‌ಪ್ಲೋರಾ 2025’ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಎಂದು ಫಾದರ್‌ ಮುಲ್ಲರ್‌ ಸೇವಾ ಸಂಸ್ಥೆ ನಿರ್ದೇಶಕರಾದ ರೆವರೆಂಡ್ ಫಾದರ್ ಫೌಸ್ಟಿನ್ ಲ್ಯೂಕಾಸ್ ಲೋಬೋ ಅವರು, ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಆಯಾಯ ವಿಭಾಗದ ಮುಖ್ಯಸ್ಥರ ಮೂಲಕ ಪ್ರತ್ಯೇಕ ಪ್ರತ್ಯೇಕವಾಗಿ ಮಾಹಿತಿ ನೀಡಿದ್ದಾರೆ. ಈ ವೇಳೆ ಕಾರ್ಯಕ್ರಮದ ಆಮಂತ್ರ ಪತ್ರಗಳನ್ನೂ ಪತ್ರಕರ್ತರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳು, ಸಿಬ್ಬಂದಿ, ವೈದ್ಯಾಧಿಕಾರಿಗಳು, ಮ್ಯಾನೇಜ್‌ಮೆಂಟ್‌ ಕಮಿಟಿಯ ಸದಸ್ಯರು,  ಮತ್ತಿತರರು ಉಪಸ್ಥಿತರಿದ್ದರು.
———————————————————————————————————-

ವಿಶ್ವ ಮಧುಮೇಹ ದಿನದ ಅಂಗವಾಗಿ ಜಾಗೃತಿ ಅಭಿಯಾನ
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆ (FMCI) ವತಿಯಿಂದ ‘ವಿಶ್ವ ಮಧುಮೇಹ ದಿನ’ದ ಅಂಗವಾಗಿ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.

“ಭಾರತವು ‘ಮಧುಮೇಹ ರಾಜಧಾನಿ’ ಎಂದು ಕರೆಯಲ್ಪಡುವಂತಾಗಿದೆ ಎಂಬುದು ಕಳವಳಕಾರಿ. ವಯಸ್ಸಾದಂತೆ ಮಧುಮೇಹ ಬರುವುದು ಸಹಜ ಎಂಬ ತಪ್ಪು ಕಲ್ಪನೆ ಇದೆ, ಆದರೆ ಆಹಾರ ನಿಯಂತ್ರಣ, ವ್ಯಾಯಾಮ ಮತ್ತು ಆರಂಭಿಕ ಪತ್ತೆ ಮೂಲಕ ರೋಗವನ್ನು ತಡೆಗಟ್ಟಬಹುದು,” ಎಂದು ಹೇಳಿದರು.

ಅಭಿಯಾನದ ಪ್ರಮುಖ ಅಂಗವಾಗಿ ‘ಅರಿವಿಗಾಗಿ ಹೆಜ್ಜೆಗಳು’ ಎಂಬ ಶೀರ್ಷಿಕೆಯಡಿ ನ.5ರಿಂದ 14ರವರೆಗೆ ನಡೆಯುವ 10 ದಿನಗಳ ದೈಹಿಕ ಚಟುವಟಿಕೆ ಅಭಿಯಾನ ಆರಂಭಗೊಂಡಿದ್ದು ಈಗಾಗಲೇ 400ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ನ.14–15ರಂದು ಸಂಸ್ಥೆಯ ಕಟ್ಟಡಕ್ಕೆ ಮಧುಮೇಹ ಜಾಗೃತಿಯ ಸಂಕೇತವಾಗಿ ನೀಲಿ ಬೆಳಕು ಅಲಂಕಾರ ಮಾಡಲಾಗಿದೆ.

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಆರೋಗ್ಯ ತಪಾಸಣೆ ಮತ್ತು ಉಪನ್ಯಾಸಗಳು, ಜಾಗೃತಿ ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ.
“ಮಧುಮೇಹ ಮತ್ತು ಸಂಸ್ಥೆ: ಅರಿವೂ ಇರಲಿ, ಆಚರಣೆಯೂ ಇರಲಿ” ವಿಷಯದಡಿ ವಿದ್ಯಾರ್ಥಿಗಳಿಗಾಗಿ ಬುಕ್‌ಮಾರ್ಕ್ ವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತ ವಿನ್ಯಾಸವನ್ನು ಹೆಚ್ಚು ಮುದ್ರಿಸಲಾಗುವುದು. ನ.15ರಂದು ಸಮಾರೋಪ ಸಮಾರಂಭ ನಡೆಯಲಿದೆ. “ಮಧುಮೇಹ ಸ್ನೇಹಿ ಆಹಾರ ತಯಾರಿಕೆ” ಮತ್ತು “ಕೆಲಸದ ಸ್ಥಳದಲ್ಲಿ ಸಕ್ರಿಯವಾಗಿರುವುದು” ಕುರಿತ ಉಪನ್ಯಾಸಗಳು, ಬಳಿಕ ಬಹುಮಾನ ವಿತರಣೆ ನಡೆಯಲಿದೆ.


———————————————————————————————————-

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಮಕ್ಕಳ ದಿನಾಚರಣೆಗೆ ಫಾದರ್ ಮುಲ್ಲರ್ ಸಂಸ್ಥೆಗಳಿಂದ ವಿಶೇಷ ಕಾರ್ಯಕ್ರಮಗಳು
ಮಕ್ಕಳ ದಿನಾಚರಣೆಯ ಅಂಗವಾಗಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಹಾಗೂ ವಾಕ್ ಮತ್ತು ಶ್ರವಣ ಕಾಲೇಜುಗಳು ಜಂಟಿಯಾಗಿ ನವೆಂಬರ್ 13ರಂದು ಬಜಾಲ್‌ನ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿವೆ. ಆಟಗಳು, ಚಿತ್ರಕಲೆ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕೇಕ್ ಕತ್ತರಿಕೆ, ಉಪಹಾರ ವಿತರಣೆ ನಡೆಯಲಿದೆ.

ನವೆಂಬರ್ 15ರಂದು ಆಸ್ಪತ್ರೆ ಸಮ್ಮೇಳನ ಸಭಾಂಗಣದಲ್ಲಿ ಹೊರರೋಗಿಗಳು, ಒಳರೋಗಿಗಳು ಮತ್ತು ಸಿಬ್ಬಂದಿ ಮಕ್ಕಳಿಗಾಗಿ ಚಿತ್ರಕಲೆ, ಫ್ಯಾನ್ಸಿ ಡ್ರೆಸ್, ರೀಲ್ ತಯಾರಿಕೆ ಹಾಗೂ ಮ್ಯಾಜಿಕ್ ಪ್ರದರ್ಶನ ನಡೆಯಲಿದೆ. ಇದೇ ವೇಳೆ ಆಗಸ್ಟ್‌ನಲ್ಲಿ ಪ್ರಾರಂಭಗೊಂಡ ‘ಬಾಂಡವ್ಯ ಮಕ್ಕಳ ಅಭಿವೃದ್ಧಿ ಕೇಂದ್ರ’ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಮಕ್ಕಳ ಬೆಳವಣಿಗೆ, ಕಲಿಕೆ ಹಾಗೂ ನಡವಳಿಕೆ ತೊಂದರೆಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಗುತ್ತಿದೆ. ಡಿಸೆಂಬರ್ 10ರಂದು ಶಿಕ್ಷಕರಿಗಾಗಿ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.


———————————————————————————————————-
NABH ಮಾನ್ಯತೆ ಪಡೆದ ಫಾದರ್ ಮುಲ್ಲರ್ ಆಸ್ಪತ್ರೆ: ವಿಶ್ವ ಗುಣಮಟ್ಟ ವಾರ ಆಚರಣೆ
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ NABH ಮಾನ್ಯತೆ ಪಡೆದಿದ್ದು 10 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ “From Legacy to Excellence” ಎಂಬ ಥೀಮ್‌ನೊಂದಿಗೆ ನವೆಂಬರ್ 14ರಂದು ಮಧ್ಯಾಹ್ನ 3 ಗಂಟೆಗೆ Decennial Memorial Hall** ನಲ್ಲಿ 10ನೇ ವರ್ಷದ ಸಂಭ್ರಮ ಹಾಗೂ ವಿಶ್ವ ಗುಣಮಟ್ಟ ವಾರ 2025 ಸಮಾರೋಪ ಸಮಾರಂಭ ನಡೆಯಲಿದೆ.

ಆಸ್ಪತ್ರೆ NABH 6th Edition Standards ಮತ್ತು NABH Digital Health Standards ಅಡಿಯಲ್ಲಿ “Gold Standard Accreditation” ಪಡೆದಿದೆ. ಈ ಮಾನ್ಯತೆ ಕ್ರಮವಾಗಿ 2025 ಆಗಸ್ಟ್ 3 ರಿಂದ 2029 ಆಗಸ್ಟ್ 2 ಹಾಗೂ 2025 ಆಗಸ್ಟ್ 25 ರಿಂದ 2029 ಆಗಸ್ಟ್ 28ರವರೆಗೆ ಮಾನ್ಯವಾಗಲಿದೆ.

ಫಾದರ್ ಮುಲ್ಲರ್ ಆಸ್ಪತ್ರೆಯ NABH ಪ್ರಯಾಣ 2015ರಲ್ಲಿ ಆರಂಭಗೊಂಡಿದ್ದು, ಇದು ನಾಲ್ಕನೇ ನಿರಂತರ ಮಾನ್ಯತಾ ಚಕ್ರವಾಗಿದೆ. NABH ಮಾನ್ಯತೆ ಆಸ್ಪತ್ರೆಯ ರೋಗಿ ಆರೈಕೆ, ಸುರಕ್ಷತೆ, ಸಿಬ್ಬಂದಿ ಸಾಮರ್ಥ್ಯಾಭಿವೃದ್ಧಿ ಹಾಗೂ ಪಾರದರ್ಶಕ ವ್ಯವಸ್ಥೆಗಳ ಪ್ರತಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ವಿಶ್ವ ಗುಣಮಟ್ಟ ವಾರವನ್ನು “Quality: Think Differently” ಎಂಬ ಥೀಮ್‌ನೊಂದಿಗೆ ನವೆಂಬರ್ 10 ರಿಂದ 14ರವರೆಗೆ ಆಚರಿಸಲಾಗುತ್ತಿದೆ. ಈ ವೇಳೆ Lean Six Sigma, Root Cause Analysis, Wealth Out of Waste, Memory Game ಮತ್ತು ಫೋಟೋಗ್ರಫಿ ಸ್ಪರ್ಧೆಗಳು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಆಸ್ಪತ್ರೆಯ Quality Control Department ಆಯೋಜಿಸಿದ್ದು, “Quality is Everyone’s Responsibility” ಎಂಬ ಸಂದೇಶವನ್ನು ಸಮಾಜದತ್ತ ಪಸರಿಸುವ ಉದ್ದೇಶ ಹೊಂದಿದೆ.
———————————————————————————————————-


‘ಎಕ್ಸ್‌ಪ್ಲೋರಾ 2025’ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ
ಶಂಕನಾಡಿಯ ಫಾದರ್ ಮಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ (FMHMC) ವತಿಯಿಂದ, ಗ್ಲೋಬಲ್ ಹೋಮಿಯೋಪ ಫೌಂಡೇಶನ್ (GHF) ಹಾಗೂ ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಮಿಯೋಪಥಿ (CCRH) ಸಹಯೋಗದಲ್ಲಿ “ಎಕ್ಸ್‌ಪ್ಲೋರಾ 2025 – ಹೋಮಿಯೋಪಥಿಕ್ ಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆಗಳ ಏಕೀಕರಣ” ಎಂಬ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವು ನವೆಂಬರ್ 14ರಿಂದ 16ರವರೆಗೆ ಫಾದರ್ ಮಲ್ಲರ್ ಕನ್ವೆನ್ಶನ್ ಸೆಂಟರ್, ಶಂಕನಾಡಿಯಲ್ಲಿ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ರೆವ. ಫಾ. ಕೌಸ್ಟಿನ್ ಲ್ಯೂಕಾಸ್ ಲೋಬೊ (ನಿರ್ದೇಶಕ, ಫಾದರ್ ಮಲ್ಲರ್ ಸೇವಾ ಸಂಸ್ಥೆಗಳು) ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಕಮಲಾ ಬಾಯಿ ಬಿ. (KAS), ಮುಖ್ಯ ಆಡಳಿತಾಧಿಕಾರಿ, ಆಯುಷ್ ಇಲಾಖೆ, ಹಾಗೂ ಡಾ. ಅಶ್ಲೇ ರಾಸ್ (ಡರ್ಬನ್ ತಂತ್ರಜ್ಞಾನ ವಿಶ್ವವಿದ್ಯಾಲಯ, ದಕ್ಷಿಣ ಆಫ್ರಿಕಾ) ಮತ್ತು ಡಾ. ಕಿಮ್ ಅಂಥೋನಿ ಜಾಬ್ (ಯುಕೆ) ಉಪಸ್ಥಿತರಿರಲಿದ್ದಾರೆ.

ಡಾ. ಆಶಾ ಕಿರಣ್ (ಆಸ್ಟ್ರೇಲಿಯಾ), ಡಾ. ನಿಕೋಲಾ ಕುಟಿನ್ತೋ (ಜರ್ಮನಿ) ಸೇರಿದಂತೆ ಭಾರತದ ಮತ್ತು ವಿದೇಶಗಳ 24ಕ್ಕೂ ಹೆಚ್ಚು ಪರಿಣಿತರ ಭಾಗವಹಿಸುವರು. ದೇಶದಾದ್ಯಂತದಿಂದ 1500ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದ ಪ್ರಮುಖ ಅಂಶಗಳಲ್ಲಿ OSCE ಪ್ರಾಯೋಗಿಕ ತರಬೇತಿ (ಹೋಮಿಯೋಪಥಿಯ ಮೂರು ವಿಷಯಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆ), ಸಂಶೋಧನಾ ಪತ್ರಿಕೆ ಮತ್ತು ಪೋಸ್ಟರ್ ಸ್ಪರ್ಧೆಗಳು, ಹಾಗೂ ಎಕ್ಸ್‌ಪ್ಲೋರಾ ಫೋಕನ್ – ಪರಿಣಿತರೊಂದಿಗೆ ನೇರ ಸಂವಾದ ವೇದಿಕೆ ಒಳಗೊಂಡಿವೆ.

ಸಮ್ಮೇಳನದ ವೇಳೆ “ಕ್ರೇನಿಯಂ” (ಆಸ್ಪತ್ರೆಯ ಮಾಹಿತಿ ನಿರ್ವಹಣಾ ಸಾಫ್ಟ್‌ವೇರ್), “ಪಯೋನೀರ್ 2025” (ವಾರ್ಷಿಕ ಕಾಲೇಜು ನಿಯತಕಾಲಿಕೆ), ಮತ್ತು “ಸಂಶೋಧನಾ ಬುಲೆಟಿನ್ 2025” (ಸಂಶೋಧನಾ ಯೋಜನೆಗಳ ಸಂಕಲನ) ಬಿಡುಗಡೆ ಮಾಡಲಾಗುತ್ತದೆ.
———————————————————————————————————-

error: Content is protected !!