ಮಂಗಳೂರು: ಕೇಸರಿ ಪ್ರೇಂಡ್ಸ್ ಗಣೇಶಪುರ ಕಾಟಿಪಳ್ಳ ಮತ್ತು ಕೆ,ಎಂ,ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಆಶ್ರಯದಲ್ಲಿ ಕಾಟಿಪಳ್ಳ ಕೇಸರಿ ಸಮುದಾಯ ಭವನದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಅವರು ಉದ್ಘಾಟಿಸಿ, ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾಗೂ ತಪಾಸಣೆ ನಡೆಸುವ ಅನಿವಾರ್ಯತೆ ಬಹಳಷ್ಟು ಪ್ರಾಮುಖ್ಯವಾಗಿದೆ ಎಂದು ನುಡಿದರು. ಕೇಸರಿ ಪ್ರೇಂಡ್ಸ್ ಸಂಘ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಕೆ.ಎಂ.ಸಿ ಅಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಕೀರ್ತನ್ ರಾವ್, ಕಾಟಿಪಳ್ಳ ಕ್ಷೇತ್ರ ಹಿಂದು ಧಾರ್ಮಿಕ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಕಾಟಿಪಳ್ಳ ಗಿರಿ ವೈಂಡರ್ಸ್ ಮಾಲಕ ಯೋಗೀಶ್ ನಾಯಕ್, ಕಾಟಿಪಳ್ಳ ನಿತ್ಯಾನಂದ ಮಹಿಳಾ ಸಮಿತಿ ಅಧ್ಯಕ್ಷೆ ಗಾಯತ್ರಿ ಸತೀಶ್ ಶೆಟ್ಟಿ, ಕೇಸರಿ ಪ್ರೇಂಡ್ಸ್ ಗಣೇಶಪುರ ಅಧ್ಯಕ್ಷರಾದ ಪುನೀತ್ ಶೆಟ್ಟಿ ಉಪಸ್ಥಿತರಿದ್ದರು.

ರಾಕೇಶ್ ಅಂಚನ್ ಕಾಟಿಪಳ್ಳ ಸ್ವಾಗತಿಸಿ, ಕೃಷ್ಣ ಕುಮಾರ್ ಧನ್ಯವಾದ ಸಮರ್ಪಿಸಿದರು. ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಿಸಿದರು