ಮಂಗಳೂರು: ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾಮದೇವಾ ಭಜನಾ ಮಂಡಳಿಯ 75 ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ,ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ದೆ ನಡೆಸಲಾಯಿತು. ಉದ್ಘಾಟನೆಯನ್ನು ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ವಿಜಯದಾಸ ಅಚಾರ್ಯ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣ,ವಾಮದೇವಾ ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಜಗನ್ನಾಥ ಶೆಟ್ಟಿ ತೇವು ಸೂರಿಂಜೆ,ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ,ಕುತ್ತೆತ್ತೂರು ಸೂರಿಂಜೆ ವರ ಮಹಾಲಕ್ಷ್ಮಿ ಪೂಜನ ಸಮಿತಿ ಅಧ್ಯಕ್ಷೆ ವಸುಧಾ ಅನಿಲ್ ಶೆಟ್ಟಿ ತೇವು ಸೂರಿಂಜೆ,ದಾಮೋದರ ಭಟ್,ಜ್ಯೋತಿ ಹರಿಪ್ರಸಾದ್ ಶೆಟ್ಟಿ,ರಾಧಾಕೃಷ್ಣ ಭಂಡಾರ್ಕರ್,ವಾಮದೇವಾ ಭಜನಾ ಮಂಡಳಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಕಾರ್ಯಾಧ್ಯಕ್ಷರಾದ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾರ್ಯದರ್ಶಿ ಜಯಶೀಲ ಸೂರಿಂಜೆ, ಕೋಶಾಧಿಕಾರಿ ವಾಮನ ಶೆಟ್ಟಿ ಗೋಣಮಜಲು ಮುಂತಾದವರು ಉಪಸ್ಥಿತರಿದ್ದರು.
