“ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ” ಎಂಬ ಮಾತು ಕೇಳಿ 9ನೇ ತರಗತಿ ಬಾಲಕ ಆತ್ಮಹತ್ಯೆ

ಕಡಬ: ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ ಎಂದು ಶಿಕ್ಷಕರು ಪೋಷಕರು ತಿಳಿಸಿದ ಬೆನ್ನಲ್ಲೇ ಆಘಾತಗೊಂಡ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಡಬದಲ್ಲಿ ನಡೆದಿದೆ. ಈ ಘಟನೆ ಪೋಷಕರು- ಶಿಕ್ಷಕರು ಮಾತ್ರವಲ್ಲದೇ ಇಡೀ ನಾಗರಿಕ ಸಮಾಜವೇ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಖಂಡಿಗ ಮನೆಯ ನಿವಾಸಿ ಗಗನ್ (14) ಆತ್ಮಹತ್ಯೆ ಮಾಡಿಕೊಂಡ ಬಾಲ. ಆತ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.

ಪೋಷಕರು ಶಾಲೆಗೆ ತೆರಳಿ ಮಗನ ವಿದ್ಯಾಭ್ಯಾಸದ ಪ್ರಗತಿ ವಿಚಾರಿಸಿದ್ದರು. ಈ ವೇಳೆ ಶಿಕ್ಷಕರು ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲವೆಂದು ತಿಳಿಸಿದ್ದರು. ಇದರಿಂದ ಬಾಲಕ ತೀವ್ರವಾಗಿ ನೊಂದುಕೊಂಡಿದ್ದ ಎಂದು ಹೇಳಲಾಗಿದೆ. ಇದರ ಮನೆಗೆ ಮರಳಿದ ಬಾಲಕ ಕೆಲವು ಸಮಯ ಆಟವಾಡಿ ನಂತರ ತನ್ನ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ.

ಕೆಲ ಸಮಯದ ನಂತರ ಗಗನ್‌ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಪೋಷಕರು ಬಾಗಿಲು ಬಲವಂತವಾಗಿ ತೆರೆಯಲು ಯತ್ನಿಸಿದಾಗ, ಬಾಲಕ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದನು. ತಕ್ಷಣವೇ ಆತನನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಗನ್‌ ತಂದೆ-ತಾಯಿ ಹಾಗೂ ಇಬ್ಬರು ಸಹೋದರ-ಸಹೋದರಿಯನ್ನು ಅಗಲಿದ್ದಾನೆ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಇಡೀ ಸಮಾಜವೇ ಎಚ್ಚೆತ್ತುಕೊಳ್ಳಬೇಕಿದೆ!

ಜೀವನದಲ್ಲಿ ವಿದ್ಯೆ ಎನ್ನುವುದು ಕೇವಲ ತಿಳುವಳಿಕೆಗಾಗಿ ಮಾತ್ರ. ಅಂಕದಿಂದ ನಮ್ಮ ಜೀವನ ರೂಪುಗೊಳ್ಳುವುದಿಲ್ಲ. ವಿದ್ಯೆಗಿಂತಲೂ ಸೃಜನಶೀಲತೆ ದೊಡ್ಡದು. ‌ ಮಕ್ಕಳಿಗೆ ಸೃಜನಶೀಲತೆ ಕಲಿಸಿ, ಅವರ ಬದುಕನ್ನೂ ಅವರೇ ರೂಸಿಕೊಳ್ಳುತ್ತಾರೆ. ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ ಬಹುತೇಕ ಮಂದಿಗೆ ವಿದ್ಯೆಯೇ ಇಲ್ಲ. ಕೆಲವರು ಅನುತ್ತೀರ್ಣಗೊಂಡವರೂ ಇದ್ದಾರೆ. ಇನ್ನು ಕೆಲವರು ಶಾಲಾ ಕಾಲೇಜುಗಳನ್ನು ಅರ್ಧದಲ್ಲಿಯೇ ತೊರೆದವರೂ ಇದ್ದಾರೆ.

ಹಾಗಾಗಿ ಕಡಬದಲ್ಲಿ ನಡೆದ ವಿದ್ಯಾರ್ಥಿಯ ಆತ್ಮಹತ್ಯೆ ಘಟನೆ ಪೋಷಕರು, ಶಿಕ್ಷಕರು ಮತ್ತು ಸಮಾಜದ ಎಲ್ಲ ವರ್ಗದವರೂ ಆಳವಾಗಿ ಚಿಂತಿಸಬೇಕಾದ ವಿಷಯವಾಗಿದೆ. ಮಕ್ಕಳ ಮೇಲೆ ವಿದ್ಯಾಭ್ಯಾಸದ ಒತ್ತಡ ಹೆಚ್ಚುತ್ತಿರುವುದು, ಅವರ ಮನಸ್ಥಿತಿಯನ್ನು ಹೆತ್ತವರು, ಶಿಕ್ಷಕರು ಅರಿಯದಿರುವುದು ಹಾಗೂ ಸಂವಾದದ ಕೊರತೆ ಇಂತಹ ದಾರುಣ ಪರಿಣಾಮಗಳಿಗೆ ಕಾರಣವಾಗುತ್ತಿದೆ.
ಪೋಷಕರು ಮಕ್ಕಳೊಂದಿಗೆ ನಿಯಮಿತವಾಗಿ ಮಾತನಾಡಬೇಕು. ಅವರ ಆತಂಕ, ಭಯ, ನಿರಾಸೆಗಳನ್ನು ಗಮನಿಸಬೇಕು. ಅಂಕಗಳಿಗಿಂತ ಮಕ್ಕಳ ಮನಸ್ಥಿತಿ ಮತ್ತು ಆತ್ಮವಿಶ್ವಾಸಕ್ಕೂ ಮಹತ್ವ ನೀಡಬೇಕು. ಶಿಕ್ಷಕರು ಸಹ ಪ್ರೋತ್ಸಾಹದ ನುಡಿಗಳನ್ನು ಬಳಸಿ ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬುವುದು ಅತ್ಯವಶ್ಯಕ. ಮಕ್ಕಳು ಮಂಕಾಗಿದ್ದರೆ, ಹಿಂದಿನಂತೆ ಆಕ್ಟೀವ್‌ ಆಗಿರದಿದ್ದರೆ ಕೌನ್ಸಿಲಿಂಗ್‌ ಮಾಡಿಸುವುದು ಒಳಿತು.

error: Content is protected !!