ಸುರತ್ಕಲ್: ಶಾಸಕರ ಭವನದ ಪುನರ್ನವೀಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ 4ಜಿ ವಿನಾಯಿತಿ ಪಡೆದಿರುವ ವಿಚಾರದಲ್ಲಿ ಸ್ಪೀಕರ್ ಹಾಗೂ ಸರ್ಕಾರದಿಂದ ಹಾರಿಕೆಯ ಉತ್ತರ ಬರುತ್ತಿದೆ ಹೊರತು ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡದೆ ನಮಗಿರುವ ಸಂದೇಹವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಎಂದು ಉತ್ತರ ವಿಧಾನಸಭಾ ಶಾಸಕ ಡಾ. ಭರತ್ ಶೆಟ್ಟಿ ವೈ. ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಈ ವಿಚಾರದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡದೆ, ‘ಈ ಹಿಂದಿನ ಅವಧಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂಬ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತೀವ್ರ ಟೀಕೆ ಮಾಡಿದರು.

ಮಂಗಳೂರು ಮಹಾನಗರ ಪಾಲಿಕೆಯಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೆ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ಸಾರ್ವಜನಿಕರ ಕೆಲಸ ಕಾರ್ಯಗಳು ತಿಂಗಳುಗಟ್ಟಲೆ ಕಚೇರಿಯಲ್ಲಿ ಉಳಿದುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
“ಸಾರ್ವಜನಿಕರು ತಮ್ಮ ಕೆಲಸಗಳಿಗೆ ರಜಾ ಹಾಕಿ, ಉದ್ದುದ್ದ ಸಾಲಿನಲ್ಲಿ ನಿಂತರೂ, ‘ಬಂದ ದಾರಿಗೆ ಸುಂಕವಿಲ್ಲ’ ಎನ್ನುವಂತೆ ಹಿಂದಿರುಗುತ್ತಿದ್ದಾರೆ. ಪ್ರಸ್ತುತ ಬಾಕಿ ಉಳಿದಿರುವ ಕಡತಗಳನ್ನು ತೀರಿಸಲು ಇನ್ನೂ ತಿಂಗಳುಗಟ್ಟಲೆ ಸಮಯ ಬೇಕಾಗಬಹುದು. ಈ ಸಾರ್ವಜನಿಕರ ಕೆಲಸದ ವಿಳಂಬಕ್ಕೆ ಸರ್ಕಾರದ ಧೋರಣೆಯೇ ಮುಖ್ಯ ಕಾರಣ” ಎಂದು ಡಾ. ಶೆಟ್ಟಿ ಆರೋಪಿಸಿದರು.