ಬೆಂಗಳೂರು: ಅಮೃತಹಳ್ಳಿಯ ಗಂಗಮ್ಮ ಲೇಔಟ್‌ನಲ್ಲಿ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆಗೈದಿರುವುದು ಘಟನೆ ನಡೆದಿದೆ.

ಪಾವಗಡ ಮೂಲದ ನಿವಾಸಿ ಅಂಜಲಿ (20) ಮೃತ ಮಹಿಳೆ. ರವಿಚಂದ್ರ ಕೊಲೆಗೈದ ಆರೋಪಿ.
ಅಂಜಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿ ಟ್ರಾವೆಲ್ಸ್ ಕಚೇರಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಅಂಜಲಿ ಸುರಪುರ ಮೂಲದ ರವಿಚಂದ್ರನ ಜೊತೆ ಮಹಿಳೆ 2ನೇ ಮದುವೆಯಾಗಿದ್ದಳು. ಮದುವೆ ನಂತರ ಅಮೃತಹಳ್ಳಿಯಲ್ಲಿ ವಾಸವಿದ್ದರು. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಪೊಲೀಸರು ಆರೋಪಿ ರವಿಚಂದ್ರನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.