ಮೂಲ್ಕಿ: ಕಂಬಳ ಪ್ರೇಮಿ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವಾ ಅವರ ಪುತ್ರ ಅಭಿಷೇಕ್ ಆಳ್ವ(29) ಅವರು ಮೊನ್ನೆ ರಾತ್ರಿಯಿಂದ ಮೂಲ್ಕಿ ಬಪ್ಪನಾಡು ಬ್ರಿಡ್ಜ್ ಬಳಿ ತನ್ನ ಕಾರ್ ನಿಲ್ಲಿಸಿ ನಾಪತ್ತೆಯಾಗಿದ್ದು ಇಂದು(ಅ.07) ಬೆಳಗ್ಗೆ ಬಪ್ಪನಾಡು ಸಮೀಪ ನದಿ ತೀರದಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಮೇಲ್ನೋಟಕ್ಕೆ ಶಂಕಿಸಲಾಗಿದ್ದು ಕಾರಣ ತಿಳಿದುಬಂದಿಲ್ಲ.

ಅಭಿಷೇಕ್ ತನ್ನ ತಂದೆಯ ಉದ್ಯಮವನ್ನು ನೋಡಿಕೊಂಡಿದ್ದರು. ತಿರುವೈಲು ಗುತ್ತು ಕಂಬಳದಲ್ಲಿ ಗುರುತಿಸಿಕೊಂಡಿದ್ದರು. ಅವರ ಸಾವು ಕುಟುಂಬ ವರ್ಗ ಮತ್ತು ಆತ್ಮೀಯ ವಲಯವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಅಭಿಷೇಕ್ ನಾಪತ್ತೆ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
