ಬೆಂಗಳೂರು: ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ ನನ್ನು ಪೊಲೀಸರು ವಶಕ್ಕೆನ ಪಡೆದುಕೊಂಡಿದ್ದಾರೆ.

ರೆನೆ ಜೋಶಿಲ್ದಾ ಬಂಧಿತ ಮಹಿಳಾ ಆರೋಪಿ.

ಚೆನ್ನೈ ಹೈದರಾಬಾದ್ ಹಾಗೂ ಗುಜರಾತಿನ ಶಾಲೆಗಳಿಗೂ ಕೂಡ ಈಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದಳು. ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ.