ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸಾಮಾಜಿಕ ಸ್ಪಂದನೆ ಮಾದರಿ : ಜಸ್ಟೀಸ್ ಕೃಷ್ಣ ದೀಕ್ಷಿತ್ ಶ್ರೀಪಾದ್

ಬೆಂಗಳೂರು : ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಆಧ್ಯಾತ್ಮಿಕ ವಿಶ್ವಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು, ಅವರ ನಿಸ್ವಾರ್ಥ ಸೇವೆಯು ನಿತ್ಯ ನಿರಂತರವಾಗಿರಲಿ ಭಕ್ತಿ ಶ್ರದ್ಧೆಯಿಂದ ನಮ್ಮ ಜೀವನ ನಡೆಸಿದಲ್ಲಿ ಸಮಾಜವು ನಮ್ಮನ್ನು ಗುರುತಿಸುತ್ತದೆ. ಪೂಜ್ಯ ಸ್ವಾಮೀಜಿಯವರು ಇನ್ನೊಬ್ಬರ ಒಳಿತನ್ನು ಸದಾ ಬಯಸುವವರು, ಕಲಾವಿದರಿಗೆ ಸಂಜೀವಿನಿಯಾಗಿದ್ದಾರೆ ಎಂದು ಒಡಿಸ್ಸಾ ಹೈಕೋರ್ಟ್‌ನ ನ್ಯಾಯಾಧೀಶ ಜಸ್ಟೀಸ್ ಕೃಷ್ಣ ದೀಕ್ಷಿತ್ ಶ್ರೀಪಾದರು ಹೇಳಿದರು.

ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವಾಶ್ರಮದಲ್ಲಿ ನಡೆದ ದೀಪಾವಳಿ, ರಾಜ್ಯೋತ್ಸವ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಸ್ಟೀಸ್ ಕೃಷ್ಣ ದೀಕ್ಷತ್ ಶ್ರೀಪಾದರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಯೋಗಿನಿ ದಂಪತಿಯನ್ನು ಸೇವಾಶ್ರಮದ ಪರವಾಗಿ, ಪರಮಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ವಿಶೇಷವಾಗಿ ಗೌರವಾರ್ಪಣೆ ಸಲ್ಲಿಸಿದರು.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಈ ಸಂದರ್ಭದಲ್ಲಿ ಬಜಪೆ ವಿಮಾನನಿಲ್ದಾಣದ ಸಿಐಎಸ್ಎಫ್ ಕಾಮೆಂಡರ್ ವಿ.ಎಂ.ಜೋಶಿ ಅವರನ್ನು ಗೌರವಿಸಲಾಯಿತು. ಕಲಾವಿದರಾದ ರವೀಂದ್ರಪ್ರಭು, ಕೃಷ್ಣಪ್ರಸಾದ್, ರೇಷ್ಮಾಮಂಜುನಾಥ್, ಮಲ್ಲಿಕಾ ಶೆಟ್ಟಿ, ಅಶೋಕ್ ಸಾವಂತ್ ರನ್ನು ಸನ್ಮಾನಿಸಲಾಯಿತು.

ಸೇವಾಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ವಿಶ್ವನಾಥ್ ಭಟ್, ಉಷಾ ವಿಶ್ವನಾಥ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್. ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಸ್ವಾಗತಿಸಿದರು. ವಕ್ತಾರ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

error: Content is protected !!