ಅಮೇರಿಕ: ನ್ಯೂಯಾರ್ಕ್ ನಗರದ ಮೇಯರ್ ಆಗಿ ಭಾರತೀಯ ಮೂಲದ ಡೆಮೋಕ್ರಾಟ್ ಜೊಹ್ರಾನ್ ಮಮ್ದಾನಿ(34) ಆಯ್ಕೆಯಾಗಿದ್ದಾರೆ. ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದರು.

ರಾಜ್ಯ ವಿಧಾನಸಭಾ ಸದಸ್ಯ ಮತ್ತು ಸ್ವಯಂ-ಪ್ರಜಾಪ್ರಭುತ್ವವಾದಿ ಸಮಾಜವಾದಿ ಮಮ್ದಾನಿ, ನಗರದ ಅತ್ಯಂತ ಕಿರಿಯ ಮೇಯರ್ ಮತ್ತು ಅದರ ಮೊದಲ ಮುಸ್ಲಿಂ ಮೇಯರ್ ಎನಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ತಮ್ಮ ಮರು ಚುನಾವಣಾ ಪ್ರಚಾರದಿಂದ ಹಿಂದೆ ಸರಿದು ಮತಪತ್ರದಲ್ಲಿ ಉಳಿದಿದ್ದ ಎರಿಕ್ ಆಡಮ್ಸ್ ಅವರ ನಂತರ ಉತ್ತರಾಧಿಕಾರಿಯಾಗಲಿದ್ದಾರೆ.

2026ರ ಜನವರಿ 1 ರಂದು ವಿಶ್ವದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಅಮೆರಿಕದ ನ್ಯೂಯಾರ್ಕ್ ನಗರದ ಮೇಯರ್ ಆಗಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಕೇವಲ 34ನೇ ವರ್ಷಕ್ಕೆ ಈ ಹುದ್ದೆಗೇರುವ ಮೂಲಕ ಅವರು ಕಳೆದ ಒಂದು ಶತಮಾನದಲ್ಲೇ ಈ ಹುದ್ದೆಗೇರಿದ ಅತ್ಯಂತ ಕಿರಿಯ ವಯಸ್ಸಿಗ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ನ್ಯೂಯಾರ್ಕ್ ನಗರವು 85 ಲಕ್ಷ ಜನಸಂಖ್ಯೆ ಹೊಂದಿದ್ದು, ಮೇಯರ್ ಚುನಾವಣೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. ಈದು 1969ರ ಬಳಿಕ ಮೇಯರ್ ಚುನಾವಣೆಗೆ ನಡೆದ ಹೆಚ್ಚಿನ ಮತದಾನವಾಗಿದೆ.