ಮಂಗಳೂರು: ರಾಜ್ಯ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲಗೊಂಡಿದೆ. ರಾಜ್ಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಿದ್ದು, ರೈತರು, ಗುತ್ತಿಗೆದಾರರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. ಯಾವುದೇ ಅನುದಾನಗಳು ಬಿಡುಗಡೆಗೊಳ್ಳದೆ ಅಭಿವೃದ್ಧಿ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ ಆರೋಪಿಸಿದ್ದಾರೆ.

ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ರಾಜ್ಯದಲ್ಲಿ ನೇಹಾ ಹಿರೇಮಠ್ ಮಾದರಿ 65ಕ್ಕೂ ಹೆಚ್ಚು ಮಹಿಳೆಯರ ಹತ್ಯೆ ನಡೆದಿದ್ದು, 1300ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 100ಕ್ಕೂ ಹೆಚ್ಚು ಮಂದಿ ಯುವಕರ ಕೊಲೆ ನಡೆದಿದೆ, ಕಮೀಷನ್ ದಂಧೆಯಿಂದ 20ಕ್ಕೂ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 7 ಅಧಿಕಾರಿಗಳು ಕಿರುಕುಳಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 13 ಮಂದಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರಸ್ತೆಗುಂಡಿಯಿಂದ ನಿತ್ಯ 5ರಂತೆ ಸಾವುನೋವುಗಳಾಗುತ್ತಿದೆ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದರು.

ರಾಜ್ಯದಲ್ಲಿ 750ಕ್ಕೂ ಹೆಚ್ಚು ಬಾಣಂತಿಯರು, ಸಾವಿರಾರು ಹಸುಗೂಸುಗಳ ಸಾವಾಗಿದೆ. 1500 ಹೆಚ್ಚು ಬ್ರೂಣ ಹತ್ಯೆ ಪ್ರಕರಣಗಳು ದಾಖಲಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಆನೆ ದಾಳಿ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದ್ದು, 25ಕ್ಕೂ ಅಧಿಕ ಸಾವುಗಳಾಗಿವೆ. ಸುಳ್ಯ, ಕಡಬದಲ್ಲಿ ಆನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಸಚಿವರು ವಿಫಲರಾಗಿದ್ದಾರೆ. ನಾಲ್ಕು 4 ಬ್ಯಾಂಕ್ ಗಳ ದರೋಡೆ ನಡೆದಿದ್ದು, ಆರೋಪಿಗಳ ಪತ್ತೆಯಾಗಿಲ್ಲ. ಸೈಬರ್ ಕ್ರೈಂಬಲ್ಲಿ ರಾಜ್ಯ ದೇಶದಲ್ಲಿ 1ನೇ ಸ್ಥಾನದಲ್ಲಿದ್ದು, ಬೆಂಗಳೂರು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಡ್ರಗ್ಸ್ ಹಾವಳಿ ತೀವ್ರಗೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಆಪ್ತರೇ ಕೃತ್ಯದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ನಾಲ್ವರು ಸಚಿವರು ಜೈಲಿಗೆ ಹೋಗಿ ಬಂದಿದ್ದರೂ ಅವರ ಪರವಾಗಿ ಸರ್ಕಾರ ನಿಂತಿದೆ. ಗಣಪತಿ ವಿಸರ್ಜನೆ ಮೇಲೆ ಕಲ್ಲು ತೂರಾಟ ನಡೆಸಿದವರು, ತಲವಾರು ಪ್ರದರ್ಶಿಸಿದವರ ಬಂಧನವಾಗ್ತಿಲ್ಲ. ಎರಡು ಠಾಣೆಗಳಿಗೆ ಬೆಂಕಿ ಹಚ್ಚಿದವನ್ನು ಬಿಡುಗಡೆ ಮಾಡಿ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ ಎಂದು ಭಾಗೀರತಿ ಮುರುಳ್ಯ ಆರೋಪಿಸಿದರು.

ರಾಜ್ಯದಲ್ಲಿ ವಕ್ಫ್ ಆಸ್ತಿ ದ್ವಿಗುಣಗೊಂಡಿದ್ದು, ಹಿಂದೂ ದೇಗುಲಗಳ ದುರಸ್ಥಿಗೆ ಸರ್ಕಾರ ಅನುದಾನ ಬಿಡುಗಡೆಗೊಳಿಸುತ್ತಿಲ್ಲ. ಅತಿವೃಷ್ಟಿ-ಅನಾವೃಷ್ಠಿಕ್ಕೀಡಾದವರ ಪಟ್ಟಿ ಬಿಡುಗಡೆಯಾಗಿದ್ದರೂ ಅವರ ಖಾತೆಗೆ ಹಣ ಜಮೆ ಆಗಿಲ್ಲ. ಹಣ ಜಮೆ ಆಗಿದ್ದಾಗಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಹೊಸ ಯೋಜನೆಗಳು ಪ್ರಕಟಗೊಳ್ಳುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡಗಡೆಯಾಗದೆ ಸರ್ಕಾರಿ ಹಾಸ್ಟೆಲ್‌ಗಳು, ಶಾಲೆಗಳು ಸೌಲಭ್ಯದಿಂದ ವಂಚಿತಗೊಂಡಿದೆ. ಆದರೆ ಪ್ರಿಯಾಂಕ್ ಖರ್ಗೆ ಅವರ ಶಾಲೆಗೆ ಮಾತ್ರ ಅನುದಾನ ಬಿಡುಗಡೆಯಾಗಿದೆ ಆರೋಗ್ಯ ಇಲಾಖೆಯಲ್ಲಿ ವೈದ್ಯರು, ದಾದಿಯರು, ಔಷಧಿಯ ಕೊರತೆ ಇದೆ. ಶಾಸಕರಿಗೆ ಶೇ.100ರಲ್ಲಿ ಶೇ.25 ಕೂಡ ಅನುದಾನ ವಂದಿಲ್ಲ. ಸುಳ್ಯ ಅಂಬೇಡ್ಕರ್ ಭವನಕ್ಕೆ ಕಾಂಗ್ರೆಸ್‌ನಿಂದ ಅನುದಾನ ಬಾರದ ಕಾರಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು. ಅಲ್ಲದೆ ಕ್ರಿಕೆಟ್‌ನಲ್ಲಿ ವಿಜೇತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಂಜುಳಾ ಅನಿಲ್ ಕುಮಾರ್, ವಜ್ರಾಕ್ಷಿ, ಸುಮಾ ಅರುಣ್, ಸುಷ್ಮಾ ಹಾಗೂ ಸಂಧ್ಯಾ ವೆಂಕಟೇಶ್ ಉಪಸ್ಥಿತರಿದ್ದರು.