ಮಂಗಳೂರು: ಮಗಳನ್ನೇ ಅತ್ಯಾಚಾರ ಮಾಡಿದ ತಂದೆಯನ್ನು ದ.ಕ ಮಹಿಳಾ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ಥ ಬಾಲಕಿಯನ್ನು ಈತ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿರುವ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆ ಅ.ಕ್ರ 80/2025 ಕಲಂ: 64(2)(f)(m),351(3) BNS 2023 ಮತ್ತು ಕಲಂ: 5(l)(n), 6 POCSO ನಂತೆ ಪ್ರಕರಣ ದಾಖಾಲಾಗಿತ್ತು.
ಪ್ರಕರಣದ ಆರೋಪಿ ಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

