ಕಾಸರಗೋಡು: ಮಂಗಳೂರು-ಕಣ್ಣೂರು ಪ್ಯಾಸೆಂಜರ್ ರೈಲು ಇದೀಗ ಪ್ರಯಾಣಿಕರಿಗೆ ದುಃಸ್ವಪ್ನದಂತೆ ಪರಿಣಮಿಸಿದೆ. ಕೋಚ್‌ಗಳ ಕೊರತೆಯಿಂದ ರೈಲಿನಲ್ಲಿ ಸೂಜಿ ಸೇರಿಸಲು ಸಹ ಸ್ಥಳವಿಲ್ಲದ ಪರಿಸ್ಥಿತಿ ಉಂಟಾಗಿದೆ. ಪ್ರಯಾಣದ ವೇಳೆಯಲ್ಲಿ ಅನೇಕ ಪ್ರಯಾಣಿಕರು ಮೂರ್ಛೆ ಹೋಗುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ.

ಸಂಜೆ 4.30ಕ್ಕೆ ಮಂಗಳೂರಿನಿಂದ ಹೊರಡುವ ರೈಲು ಕಾಸರಗೋಡು, ಕಾಞಂಗಾಡು ಮತ್ತು ನೀಲೇಶ್ವರಂ ನಿಲ್ದಾಣಗಳವರೆಗೆ ಪ್ರಯಾಣಿಕರ ತುಂಬು ಸಂಚಾರದಿಂದ ಉಸಿರುಗಟ್ಟಿಸುವಂತ ವಾತಾವರಣ ನಿರ್ಮಾಣವಾಗುತ್ತದೆ. ಆನಂತರದ ಹಂತದಲ್ಲಿ ಚಲಿಸಲು ಸಹ ಅಸಾಧ್ಯವಾಗುವ ಪರಿಸ್ಥಿತಿ ಎದುರಾಗುತ್ತದೆ.
ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಶಿಕ್ಷಕರು ಹಾಗೂ ಇತರ ಕೆಲಸಕ್ಕಾಗಿ ಪ್ರಯಾಣಿಸುವವರಿಂದ ಬೋಗಿಗಳು ಕಿಕ್ಕಿರಿದಿರುತ್ತವೆ. ಚೆರುವತ್ತೂರು ಮತ್ತು ತ್ರಿಕರಿಪುರ ನಿಲ್ದಾಣಗಳನ್ನು ದಾಟಿದ ನಂತರ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಜನಸಂದಣಿ ಕಡಿಮೆಯಾಗುತ್ತದೆ.
ಪ್ರಯಾಣಿಕರ ತೊಂದರೆ ನಿವಾರಣೆಗೆ ರೈಲಿನ ಕೋಚ್‌ಗಳ ಸಂಖ್ಯೆಯನ್ನು ತಕ್ಷಣವೇ ಹೆಚ್ಚಿಸಲು ಅಥವಾ ಪರ್ಯಾಯ ರೈಲು ಸೇವೆ ಒದಗಿಸಲು ರೈಲು ಇಲಾಖೆಯನ್ನು ಪ್ರಯಾಣಿಕರು ಒತ್ತಾಯಿಸಿದ್ದಾರೆ.

