ಬೆಂಗಳೂರು: ವೇಗವಾಗಿ ಬಂದ ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ನೇಪಾಳ ಮೂಲದ ಹೂಡಿ ನಿವಾಸಿ ನರೇಶ್ ಕುಮಾರ್(32) ಮೃತ ಸವಾರ.
ಸಂಬಂಧಿಕರೊಬ್ಬರ ಮನೆಯಿಂದ ಮುಂಜಾನೆ 1.20ರ ಸುಮಾರಿನಲ್ಲಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯೆ ರಾಮಮೂರ್ತಿ ನಗರದ ಬಿ.ಚನ್ನಸಂದ್ರ ಮುಖ್ಯರಸ್ತೆಯ ಬಳಿ ಹಿಂದಿನಿಂದ ವೇಗವಾಗಿ ಬಂದ ಗೂಡ್ಸ್ ವಾಹನ ಇವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನರೇಶ್ ಕುಮಾರ್ ರಸ್ತೆಗೆ ಬಿದ್ದಿದ್ದರು. ಅವರ ಮೇಲೆ ವಾಹನದ ಮುಂಭಾಗದ ಚಕ್ರ ಹರಿದಿದ್ದರಿಂದ ಗಂಭೀರ ಗಾಯಗೊಂಡಿದ್ದರು. ಗೂಡ್ಸ್ ವಾಹನ ಚಾಲಕ ವಾಹನವನ್ನು ಘಟನಾ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದಾನೆ.

ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆಯೇ ಮೃತಪಟ್ಟಿರುವುದನ್ನು ದೃಢಪಡಿಸಿದ್ದರು.