ಸುಳ್ಯ: ಬೆಳ್ಳಾರೆ ಠಾಣೆ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಮಾಲೆತ್ತೋಡಿ ಧರ್ಮ (62) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮಲು ಪದಾರ್ಥ ಸೇವಿಸುತ್ತಿದ್ದ ಅವರು ಅ. 27ರಂದು ಮನೆಗೆ ಮದ್ಯ ಸೇವಿಸಿ ಬಂದವರು ಬಳಿಕ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದರು. ಅಸ್ವಸ್ಥಗೊಂಡ ಅವರನ್ನು ಮನೆಯವರು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರು. ಪರೀಕ್ಷಿಸಿದ ವೈದ್ಯರು ಅವರು ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಬೆಳ್ಳಾರೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

ಧರ್ಮ ಅವರು 2018ರಲ್ಲೂ ವಿಷ ಪದಾರ್ಥ ಸೇವಿಸಿದ್ದು, ಅಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅನಂತರ ಕೆಲವೊಂದು ಸಲ ವಿಪರೀತ ಅಮಲು ಪದಾರ್ಥ ಸೇವಿಸಿದ ದಿನಗಳಲ್ಲಿ ಅವರು ವಿಷ ತೆಗದುಕೊಂಡು ಸಾಯುವುದಾಗಿ ಮನೆಯವರಲ್ಲಿ ಹೇಳುತ್ತಿದ್ದರು. ಆಗೆಲ್ಲ ಮನೆಯವರು ಬುದ್ಧಿವಾದ ಹೇಳುತ್ತಿದ್ದರು.