ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಾಹನಗಳು ಚಲನೆಯಲ್ಲಿದ್ದಂತೆಯೇ ಹೊತ್ತಿ ಉರಿಯುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇತ್ತೀಚೆಗೆ ಕರ್ನೂಲ್‌ನಲ್ಲಿ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದದೆ. ಮಂಗಳೂರು, ಬೆಂಗಳೂರು, ಮಂಡ್ಯ ಸೇರಿ ಹಲವೆಡೆ ವಾಹನಗಳು ಹೊತ್ತಿ ಉರಿದಿವೆ. ಸುರಕ್ಷತೆಯ ಪಟ್ಟಿಯಲ್ಲಿ ಸ್ಥಾನ ಪಡೆದ ವಾಹನಗಳೂ ಹೊತ್ತಿ ಉರಿದಿದೆ.

ಬೆಂಕಿಗಾಹುತಿಯಾಗಲು ಪ್ರಮುಖ ಕಾರಣಗಳು:
ಎಂಜಿನ್ ಓವರ್‌ಹೀಟ್ (Overheating): ಉಷ್ಣತೆಯನ್ನು ನಿಯಂತ್ರಿಸುವ ವ್ಯವಸ್ಥೆ ವೈಫಲ್ಯಗೊಂಡರೆ ಇಂಧನ ಪೈಪ್‌ಗಳ ತಾಪಮಾನ ಹೆಚ್ಚಿ ಬೆಂಕಿ ಕಾಣಿಸಬಹುದು.
ವೈರ್ ಶಾರ್ಟ್ ಸರ್ಕ್ಯೂಟ್: ಹಳೆಯ ಅಥವಾ ನಿರ್ಲಕ್ಷ್ಯದಿಂದ ನಿರ್ವಹಿಸಿದ ವಾಹನಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ದೋಷ ಉಂಟಾದರೆ ತಕ್ಷಣ ಬೆಂಕಿ ಕಾಣಿಸಬಹುದು.
ಇಂಧನ ಸೋರಿಕೆ: ಡೀಸೆಲ್ ಅಥವಾ ಪೆಟ್ರೋಲ್ ಸೋರಿಕೆ ಆಗಿ ಎಂಜಿನ್‌ನ ಬಿಸಿ ಭಾಗಕ್ಕೆ ತಗುಲಿದರೆ ಬೆಂಕಿ ಹತ್ತುವುದು ಸಾಮಾನ್ಯ.
ಹೆಚ್ಚು ವೇಗ ಮತ್ತು ಘರ್ಷಣೆ: ಹೆಚ್ಚು ವೇಗದಿಂದ ಚಲಿಸುತ್ತಿರುವ ವಾಹನದ ಟೈರ್ ತಾಪದಿಂದ ಸ್ಫೋಟಗೊಂಡು ಬೆಂಕಿಗೆ ಕಾರಣವಾಗಬಹುದು.
ಅಸಮರ್ಪಕ ಬದಲಾವಣೆಗಳು (Modification): ಅಪ್ರಮಾಣಿತ ಗ್ಯಾರೇಜ್‌ಗಳಲ್ಲಿ ಅಸಮರ್ಪಕವಾಗಿ ಅಳವಡಿಸಿದ ಎಲ್‌ಪಿಜಿ ಅಥವಾ ಸಿಎನ್‌ಜಿ ಕಿಟ್‌ಗಳು ಅಪಾಯದ ಪ್ರಮುಖ ಮೂಲಗಳಾಗಿವೆ.

ತುರ್ತು ಕ್ರಮಗಳು ಮತ್ತು ಮುನ್ನೆಚ್ಚರಿಕೆ:
ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ — ಪ್ರತಿ ವಾಹನದಲ್ಲಿಯೂ ಫೈರ್ ಎಕ್ಸ್ಟಿಂಗ್ವಿಷರ್ ಕಡ್ಡಾಯವಾಗಿ ಇರಬೇಕು.
ವಾಹನದ ನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯವಶ್ಯಕ.
ಅಸಮರ್ಪಕ ಮೋಡಿಫಿಕೇಷನ್‌ಗಳಿಂದ ದೂರವಿರಬೇಕು.
ಇಂಧನ ಸೋರಿಕೆ ಅಥವಾ ವಿದ್ಯುತ್ ದೋಷ ಕಂಡುಬಂದರೆ ತಕ್ಷಣ ತಜ್ಞರನ್ನು ಸಂಪರ್ಕಿಸಬೇಕು.
ತಾಂತ್ರಿಕ ದೋಷಗಳು, ನಿರ್ಲಕ್ಷ್ಯ ಮತ್ತು ಅಸಮರ್ಪಕ ತಿದ್ದುಪಡಿ ಕ್ರಮಗಳು ಈ ರೀತಿಯ ಅಪಘಾತಗಳಿಗೆ ಕಾರಣವಾಗುತ್ತಿವೆ. ತಜ್ಞರು ಜನರಿಗೆ ಎಚ್ಚರಿಕೆ ನೀಡುತ್ತಿದ್ದು, ವಾಹನ ಸವಾರರು ನಿಯಮಿತ ತಪಾಸಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
