ಬೆಂಗಳೂರು: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈಗ ‘ಪ್ರೇಮ್ ಕಹಾನಿ’! ವೈಲ್ಡ್ ಕಾರ್ಡ್ ಎಂಟ್ರಿ ಸೂರಜ್ ಮತ್ತು ರಾಶಿಕಾ ನಡುವೆ ಹೊಸ ಪ್ರೇಮ ಕಹಾನಿ ಶುರುವಾಗಿದೆ. ಆದರೆ, ಇದು ನಿಜವಾದ ಪ್ರೇಮವೋ ಅಥವಾ ಮನೆಯಲ್ಲಿ ಉಳಿಯಲು ರಚಿಸಿಕೊಂಡ ‘ಸ್ಟ್ರಾಟಜಿ’ಯೋ ಎಂಬ ಪ್ರಶ್ನೆ ವೀಕ್ಷಕರ ಮನಸ್ಸಿನಲ್ಲಿ ಕಿಡಿ ಹಾರಿಸಿದೆ.

ಸೂರಜ್ ಮನೆ ಸೇರಿದ ದಿನದಿಂದಲೂ ರಾಶಿಕಾ ಅವರಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ. ಮುಂಚೆ ಕಡಿಮೆ ಸಕ್ರಿಯರಾಗಿದ್ದ ರಾಶಿಕಾ, ಇಂದು ಸೂರಜ್ ಜೊತೆ ಫುಲ್ ಆಕ್ಟೀವ್ ಆಗಿ ನಗು-ಮಾತು, ತರ್ಲೆ ತುಂಟಾಟಗಳಲ್ಲಿ ಮಗ್ನರಾಗಿದ್ದಾರೆ. ಸೂರಜ್ ಅವರು “ರಾಶಿಕಾ, ನೀನು ಕ್ಯೂಟ್ ಆಗಿ ಕಾಣಿಸುತ್ತೀಯಾ” ಎಂದು ಹಚ್ಚಿದ ಮಾತು ಪ್ರೇಮ ಲೀಲೆಗೆ ಮುನ್ನುಡಿಯಾದಂತಿದೆ.

ಅಷ್ಟು ಬೇಗನೆ ಇವರ ಮಧ್ಯೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರದ್ದು. ಬಿಗ್ ಬಾಸ್ ಮನೆಯಲ್ಲೂ ಅಷ್ಟು ಬೇಗನೆ ಇವರ ಮಧ್ಯೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದ್ದು, ಇದಕ್ಕೆ ಉತ್ತರಿಸಿದ ರಾಶಿಕಾ, ‘ಪ್ರೀತಿ ಎಲ್ಲಿ, ಹೇಗೆ ಹುಟ್ಟುತ್ತದೆ ಎಂದು ಹೇಳೋಕೆ ಆಗಲ್ಲ’ ಎಂದು ಉತ್ತರಿಸಿದ್ದಾರೆ.

ಬರೀ ಸೂರಜ್ ಜೊತೆಗೆ ಇದ್ದರೆ ರಾಶಿಕಾ ಶೆಟ್ಟಿ ಆದಷ್ಟು ಬೇಗ ಹೊರಗಡೆ ಬರ್ತಾರೆ ಎಂದು ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಹೇಳಿಕೊಂಡಿದ್ದರು. ಇದನ್ನರಿತು ಆಟದ ಕಡೆ ಗಮನ ಹರಿಸುತ್ತಾರೆಂಬ ಜನರ ನಿರೀಕ್ಷೆಗೆ ತನ್ನೀರೆರೆಚಿದಂತಾಗಿದೆ. ಕಳೆದ ವಾರಕ್ಕಿಂತ ಈ ವಾರವೇ ಇವರಿಬ್ಬರ ಕ್ಲೋಸ್ನೆಸ್ ಜಾಸ್ತಿ ಆದಂತೆ ಕಾಣುತ್ತಿದೆ.
